Home » Actor Darshan: ನಟ ದರ್ಶನ್ ಮೇಲಿನ ಅಭಿಮಾನಕ್ಕೆ ಮಗನನ್ನೇ ಕೈದಿ ಮಾಡಿದ ಗ್ರೇಟ್ ಅಪ್ಪ !

Actor Darshan: ನಟ ದರ್ಶನ್ ಮೇಲಿನ ಅಭಿಮಾನಕ್ಕೆ ಮಗನನ್ನೇ ಕೈದಿ ಮಾಡಿದ ಗ್ರೇಟ್ ಅಪ್ಪ !

0 comments
Actor Darshan

Actor Darshan: ನಟ ದರ್ಶನ್ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿ ಬಂದಿಯಾಗಿದ್ದಾರೆ. ಆದರೆ ನಟ ದರ್ಶನ್ ಮೇಲೆ ಆತನ ಫ್ಯಾನ್ ಗಳ ಅಭಿಮಾನ ಕೊಂಚವೂ ಕುಗ್ಗುತ್ತಿಲ್ಲ. ಅಲ್ಲೊಂದು ಕಡೆ ದರ್ಶನ್ ಮೇಲಿನ ಅಭಿಮಾನ ಎಲ್ಲೆ ಮೀರಿದೆ. ದರ್ಶನ್ ನ ಮಿತಿಮೀರಿದ ಅಭಿಮಾನಕ್ಕೆ ಹುಚ್ಚು ಅಭಿಮಾನಿಯೊಬ್ಬ ತನ್ನ ಹೆತ್ತ ಮಗುವನ್ನೇ ಕೈದಿ ಮಾಡಿದ್ದಾನೆ. ಇದು ನಟನ ಮೇಲಿನ ಅಭಿಮಾನದ ಲೇಟೆಸ್ಟ್ ರಿಸಲ್ಟ್. ಆತ ತನ್ನ ಮಗುವಿಗೆ ಪರಪ್ಪನ ಅಗ್ರಹಾರದ ಕೈದಿಯಂತೆ ಫೋಟೋ ಶೂಟ್ ಮಾಡಿಸಿದ್ದಾನೆ.

Kolara: ರಾಜ್ಯದಲ್ಲೊಂದು ಶಾಕಿಂಗ್ ಪ್ರಕರಣ – ಕಾಲೇಜಲ್ಲೇ ಮಗುವಿಗೆ ಜನ್ಮ ನೀಡಿದ 1st ಪಿಯು ವಿದ್ಯಾರ್ಥಿನಿ !!

ದರ್ಶನ್ ನ ಈ ಅಭಿಮಾನಿ ತನ್ನ ಒಂದು ವರ್ಷದ ಮಗುವಿಗೆ ಜೈಲು ಕೈದಿಯ ರೀತಿಯಲ್ಲೇ ಬಿಳಿ ಬಟ್ಟೆ ತೊಡಿಸಿ ಫೋಟೋ ‌ಶೂಟ್ ಮಾಡಿಸಿದ್ದಾನೆ. ಮಗುವಿಗೆ ದರ್ಶನ್‌ಗೆ ಕೊಡಲಾದ ಕೈದಿ ನಂಬರ್ ಅನ್ನೇ ನೀಡಿದ್ದಾನೆ. ಕೈಗೆ ಕೋಳದ ಮಾದರಿ ಹಾಕಿಸಿ, ಕೈದಿಗಳ ರೀತಿ ಬಟ್ಟೆ ಹಾಕಿಸಿದ್ದಾನೆ. ನಂತರ ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾನೆ.

ಹುಚ್ಚು ಅಭಿಮಾನಕ್ಕೆ ಅಭಿಮಾನಿಗಳಿಂದ ನಿತ್ಯ ಒಂದೊಂದು ವಿಶೇಷ ಪೋಸ್ಟ್ ಗಳು ಹೊಸ ಹೊಸ ಟ್ರೆಂಡ್ ಸೃಷ್ಟಿಯಾಗುತ್ತಿದೆ. ದರ್ಶನ್ ಇವತ್ತಿನ ಟ್ರೆಂಡಿಂಗ್ ಸಬ್ಜೆಕ್ಟ್. ಕೆಲವರು ಅದೇ ಸಬ್ಜೆಕ್ಟ್ ಇಟ್ಟುಕೊಂಡು ವಿಡಿಯೋ ಮಾಡಿ ತಾವೇ ಒಂದಷ್ಟು ಫೇಮಸ್ ಆಗಲು ಪ್ರಯತ್ನಿಸುತ್ತಿದ್ದಾರೆ. ಮೊನ್ನೆ ಒಬ್ಬಾತ ದರ್ಶನ್‌ಗೆ ನೀಡಿರುವ ಕೈದಿ ನಂಬರ್ ಧರಿಸಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದ. ಇದೀಗ ಮಗುವಿಗೆ ಇಂಥದ್ದೇ ಫೋಟೋ ಶೂಟ್. ಈ ಘಟನೆಗೆ ಸಾಮಾಜಿಕ ಜಾಲತಾಣ ತೀಕ್ಷ್ಣವಾಗಿ ಸ್ಪಂದಿಸಿದೆ. ಮಗುವನ್ನು ಕೈದಿ ಮಾಡಿದ ಅಪ್ಪನ ನಡೆಯನ್ನು ಸಾಮಾಜಿಕ ತಾಣ ಖಂಡಿಸಿದೆ.

Dakshina Kannada: ದ.ಕ. ನೂತನ ಎಸ್ಪಿಯಾಗಿ ಯತೀಶ್ ಎನ್‌ ನೇಮಕ; ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್‌ ವರ್ಗಾವಣೆ

You may also like

Leave a Comment