Home » Viral Video : ಶರವೇಗದಲ್ಲಿ ಬಂದು ಜಿಂಕೆಯನ್ನು ಹೊತ್ತೊಯ್ದ ರಣ ಹದ್ದು – ರೋಚಕ ವಿಡಿಯೋ ವೈರಲ್

Viral Video : ಶರವೇಗದಲ್ಲಿ ಬಂದು ಜಿಂಕೆಯನ್ನು ಹೊತ್ತೊಯ್ದ ರಣ ಹದ್ದು – ರೋಚಕ ವಿಡಿಯೋ ವೈರಲ್

by V R
0 comments

Viral Video : ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಕೆಲವೊಂದು ವಿಡಿಯೋಗಳು ಸಿಕ್ಕಾಪಟ್ಟೆ ವೈರಲಾಗುತ್ತವೆ. ಅದರಲ್ಲೂ ಕೆಲವು ಹಳೆಯ ವಿಡಿಯೋಗಳು ಕೂಡ ಮತ್ತೆ ಮತ್ತೆ ಜನರ ಮನಸ್ಸನ್ನು ಗೆಲ್ಲುತ್ತಿರುತ್ತದೆ. ಇದೀಗ ಹಾಗೆಯೇ ಆಗಿದ್ದು ಹಳೆಯ ವಿಡಿಯೋ ಒಂದು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ವೈರಲ್ ಆದ ವಿಡಿಯೋ ಕಂಡರೆ ಎಂತವರಿಗೂ ಕೂಡ ರೋಮಾಂಚನವಾಗುತ್ತದೆ. ಏಕೆಂದರೆ ಆಕಾಶದಲ್ಲಿ ಹಾರಾಡುತ್ತಿದ್ದ ಸಾಮಾನ್ಯ ರಣಹದ್ದು ಒಂದು ಭೂಮಿಯಲ್ಲಿ ಬೇಯುತ್ತಿದ್ದ ಜಿಂಕೆಯನ್ನು ಮಿಂಚಿನ ವೇಗದಲ್ಲಿ ಬಂದು ಕಚ್ಚಿ ಎತ್ತಿಕೊಂಡು ಹೋಗಿದೆ. ರಣಹದ್ದು ಶರವೇಗದಲ್ಲಿ ಧುಮುಕಿ ಜಿಂಕೆಯನ್ನು ಎತ್ತಿಕೊಂಡು ಆಕಾಶಕ್ಕೆ ಹಾರುವ ದೃಶ್ಯವು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.

ವೀಡಿಯೊದಲ್ಲಿ, ಪರ್ವತದ ಇಳಿಜಾರಿನಲ್ಲಿ ಹುಲ್ಲು ತಿನ್ನುತ್ತಿರುವ ಜಿಂಕೆಯ ಮೇಲೆ ರಣಹದ್ದು ಏಕಾಏಕಿ ಧುಮುಕುತ್ತದೆ. ಕಣ್ಣು ಮಿಟುಕಿಸುವ ಮೊದಲೇ, ಜಿಂಕೆಯನ್ನು ತನ್ನ ಚಾಣಾಕ್ಷ ಉಗುರುಗಳಿಂದ ಗಟ್ಟಿಯಾಗಿ ಹಿಡಿದು ಆಕಾಶಕ್ಕೆ ಹಾರುತ್ತದೆ. ಈ ದೃಶ್ಯವು ನೋಡುಗರಿಗೆ ರೋಮಾಂಚಕವಾಗಿದೆ. ಒಂದು ರಣಹದ್ದು ಇಷ್ಟು ದೊಡ್ಡ ಜಿಂಕೆಯನ್ನು ಎತ್ತಿಕೊಂಡು ಹಾರಬಹುದೇ ಎಂಬ ಪ್ರಶ್ನೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: Tirumala: ಸಿಎಂ ಹೇಳಿದ್ರು ಡೋಂಟ್ ಕೇರ್- ಪ್ರತಿ ಭಾನುವಾರ ಚರ್ಚ್ ಗೆ ಹೋಗಿ ಬರುತ್ತಿದ್ದ ಟಿಟಿಡಿ ಸಿಬ್ಬಂದಿ, ಈಗೇನಾಯ್ತು ಗೊತ್ತಾ?

You may also like