Home » First night video: ತನ್ನದೇ ಫಸ್ಟ್ ನೈಟ್ ವಿಡಿಯೋ ತೋರಿಸಿ ಸರ್ಕಾರಿ ಅಧಿಕಾರಿಯಿಂದ ಪತ್ನಿಗೆ ಬ್ಲ್ಯಾಕ್​ಮೇಲ್!

First night video: ತನ್ನದೇ ಫಸ್ಟ್ ನೈಟ್ ವಿಡಿಯೋ ತೋರಿಸಿ ಸರ್ಕಾರಿ ಅಧಿಕಾರಿಯಿಂದ ಪತ್ನಿಗೆ ಬ್ಲ್ಯಾಕ್​ಮೇಲ್!

0 comments
First night

First night video: ಪುರುಷರು ಕೆಲವೊಮ್ಮೆ ಮಹಿಳೆಯರನ್ನು ಶೋಷಣೆ ಮಾಡುವುದು ಅತಿರೇಖವಾಗುತ್ತಿದೆ ಅನ್ನುವುದಕ್ಕೆ ಇದೊಂದು ಉದಾಹರಣೆ. ಹೌದು, ಇಲ್ಲೊಬ್ಬ ಸರ್ಕಾರಿ ಅಧಿಕಾರಿ, ತನ್ನದೇ ಮೊದಲ ರಾತ್ರಿಯ ವಿಡಿಯೋ ರೆಕಾರ್ಡ್ ಮಾಡಿ ಇಟ್ಟುಕೊಂಡು ಪತ್ನಿಯನ್ನೇ ಬ್ಲ್ಯಾಕ್​ಮೇಲ್ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ರಾಯಚೂರು ಮಾನ್ವಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದ್ದು, ಪ್ರಕರಣವೂ ದಾಖಲಾಗಿದೆ.

ಫಸ್ಟ್ ನೈಟ್ ವಿಡಿಯೋ (First night video) ರೆಕಾರ್ಡ್ ಮಾಡಿ ಇಟ್ಟುಕೊಂಡಿರುವ ಮಾನ್ವಿ ವಿಭಾಗದ ಜೆಸ್ಕಾಂನಲ್ಲಿ ಮೇಲ್ವಿಚಾರಕ ಹುದ್ದೆಯಲ್ಲಿರುವ ಗುರುರಾಜ್, ನಾನು ಹೇಳಿದಂತೆ ಕೇಳದೆ ಇದ್ದಲ್ಲಿ, ಖಾಸಗಿ ಕ್ಷಣದ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ತಾನು ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಗುರುರಾಜ್​ನನ್ನು ನಂಬಿ ಮದುವೆಯಾಗಿದ್ದಾಗಿ ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಗುರುರಾಜ್ ತನ್ನ ಚಾಲಕನನ್ನು ಬಳಸಿಕೊಂಡು ಸಾಕಷ್ಟು ಜನರಿಗೆ ಪತ್ನಿಯ ಜತೆಗಿನ ಲೈಂಗಿಕ ಕ್ರಿಯೆಯ ವಿಡಿಯೋ ತೋರಿಸಿದ್ದಾರೆ ಎಂದೂ ಆರೋಪಿಸಲಾಗಿದೆ. ಅಲ್ಲದೆ ಗುರುರಾಜ್ ಪತ್ನಿಗೆ ಟಾರ್ಚರ್ ಕೊಟ್ಟಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರಿಗೆ ಅಶ್ಲೀಲವಾಗಿ ವಿಡಿಯೋ ಕಾಲ್ ಮಾಡಿರುವ ಸಾಕ್ಷಿಗಳಿವೆ ಎಂದೂ ಸಂತ್ರಸ್ತೆ ಆರೋಪಿಸಿದ್ದಾರೆ. ಜತೆಗೆ, ಈಗಾಗಲೇ ಪತಿ ಗುರುರಾಜ್ ನಾಲ್ಕು ಮದುವೆ ಆಗಿದ್ದಾರೆ. ನನ್ನಲ್ಲಿ ಕೋಟಿಗಟ್ಟಲೇ ಲಾಭ ಬರತ್ತದೆ ಎಂದು ನಂಬಿಸಿ ಮದುವೆಯಾಗಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.

ಇನ್ನು ಸಾಕಷ್ಟು ಬಾರಿ ನನ್ನ ಮೇಲೆ ದಾಳಿ ಮಾಡಿದ್ದಾರೆ. ನನಗೆ ರಕ್ಷಣೆ ಕೊಡಿ, ಪತಿ ಗುರುರಾಜ್ ವಿರುದ್ಧ ಕ್ರಮಕೈಗೊಳ್ಳಿ ಎಂದು ಮಾನ್ವಿ ಠಾಣೆ ಪೊಲೀಸರಿಗೆ ಮಹಿಳೆ ಮನವಿ ಮಾಡಿದ್ದು, ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದ್ದು ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.

You may also like

Leave a Comment