Home » 50 ಸಾವಿರ ವರ್ಷಗಳ ಬಳಿಕ ಭೂಮಿಯ ಸನಿಹಕ್ಕೆ ಬರಲಿದೆ ಹಸಿರು ಧೂಮಕೇತು! ಫೆಬ್ರವರಿ 2ರ ರಾತ್ರಿ ಭಾರತದಲ್ಲೂ ಕಾಣಿಸಿಕೊಳ್ಳಲಿದೆ!!

50 ಸಾವಿರ ವರ್ಷಗಳ ಬಳಿಕ ಭೂಮಿಯ ಸನಿಹಕ್ಕೆ ಬರಲಿದೆ ಹಸಿರು ಧೂಮಕೇತು! ಫೆಬ್ರವರಿ 2ರ ರಾತ್ರಿ ಭಾರತದಲ್ಲೂ ಕಾಣಿಸಿಕೊಳ್ಳಲಿದೆ!!

by ಹೊಸಕನ್ನಡ
0 comments

ಖಗೋಳದ ಒಂದೊಂದು ಕೌತುಕಗಳು ಕೂಡ ನಮ್ಮನ್ನು ಮೂಕವಿಸ್ಮಿತರಾಗಿ ಮಾಡುತ್ತವೆ. ಇದೀಗ ಇಂತದೇ ಒಂದು ಕೌತುಕವು ಮತ್ತೆ ಎದುರಾಗಲಿದ್ದು, ಸುಮಾರು 50 ಸಾವಿರ ವರುಷಗಳ ನಂತರ ಇದು ಸಂಭವಿಸುತ್ತಿದೆ. ಹೌದು, ಸುಮಾರು 50 ಸಾವಿರ ವರ್ಷಗಳ ಹಿಂದೆ ಭೂಮಿಯ ಸಮೀಪ ಹಾದುಹೋಗಿದ್ದ ಹಸಿರು ಧೂಮಕೇತು ಮತ್ತೆ ಫೆಬ್ರವರಿ 2 ರಂದು ಭೂಮಿಯ ಸಮೀಪ ಹಾದುಹೋಗಲಿದೆ.

ನಿಯಾಂಡರ್ಥಲ್ ಮಾನವರು ಭೂಮಿ ಮೇಲೆ ವಾಸವಿದ್ದರು ಎಂದು ಹೇಳಲಾಗುವ ಸಮಯದಲ್ಲಿ ಈ ಹಸಿರು ಧೂಮಕೇತು ಕಾಣಿಸಿತ್ತು. ಅಂದರೆ ಸುಮಾರು 50 ಸಾವಿರ ವರ್ಷಗಳ ಹಿಂದೆ ಭೂಮಿಯ ಸಮೀಪದಲ್ಲಿ ಹಾದು ಹೋಗಿದ್ದ ‘ಹಸಿರು ಧೂಮಕೇತು ಫೆ.2ರಂದು ಮತ್ತೊಮ್ಮೆ ಭೂಮಿಯ ಸಮೀಪಕ್ಕೆ ಬರಲಿದೆ. ಈ ಬಾರಿ ಈ ಧೂಮಕೇತು ಭಾರತದಲ್ಲೂ ಕಾಣಿಸಿಕೊಳ್ಳಲಿದ್ದು, ಬೈನಾಕ್ಯುಲರ್‌ (binoculars)ಸಹಾಯದಿಂದ ಕತ್ತಲೆಯ ವೇಳೆಯಲ್ಲಿ ವೀಕ್ಷಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈಗಾಗಲೇ ಹಲವು ದೂರದರ್ಶಕಗಳ (telescopes)ಮೂಲಕ ಈ ಧೂಮಕೇತುವಿನ (comet) ಚಿತ್ರವನ್ನು ಸೆರೆಹಿಡಿದಿದ್ದು, ಹಸಿರು ಬಾಲದೊಂದಿಗೆ ಪ್ರಕಾಶಮಾನವಾಗಿ ಈ ಧೂಮಕೇತು ಚಲಿಸುತ್ತಿರುವುದು ಕಂಡುಬಂದಿದೆ.

ಖಗೋಳ ವಿಜ್ಞಾನಿಗಳಾದ ಬ್ರೈಸ್‌ ಬೋಲಿನ್‌ ಮತ್ತು ಫ್ರಾಂಕ್‌ ಮಾಸ್ಕಿ ಈ ಧೂಮಕೇತುವನ್ನು 2022ರ ಮಾರ್ಚ್ 2ರಂದು ಕಂಡುಹಿಡಿದರು. ಈ ಮಾದರಿಯ ಧೂಮಕೇತುಗಳು ನಮ್ಮ ಸೌರಮಂಡಲದಾಚೆ ಇರುವ ಊರ್ಚ್‌ ಕ್ಲೌಡ್‌ ಎಂಬ ಪ್ರದೇಶದಲ್ಲಿ ನಿರ್ಮಾಣವಾಗಿ ಅಲ್ಲಿಂದ ಚಲಿಸಲು ಆರಂಭಿಸುತ್ತವೆ. ಇದೊಂದು ಪ್ರಕಾಶಮಾನವಾದ ಬಾಲ ಹೊಂದಿರುವ ಧೂಮಕೇತುವಾಗಿದ್ದು, ಇಂತಹುದನ್ನು ಮತ್ತೆ 50 ಸಾವಿರ ವರ್ಷಗಳವರೆಗೆ ನೋಡಲಾಗುವುದಿಲ್ಲ ಎಂದು ಖಗೋಳಶಾಸ್ತ್ರಜ್ಞನರು ಹೇಳಿದ್ದಾರೆ.

ಉತ್ತರಾರ್ಧಗೋಳದಲ್ಲಿ ಈ ಧೂಮಕೇತು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಪ್ರಸ್ತುತ ಇದು ಪೋಲ್‌ ಸ್ಟಾರ್‌ (ಪೊಲಾರಿಸ್‌) ಮತ್ತು ದ ಗ್ರೇಟ್‌ ಬೀರ್‌ (ಸಪ್ತರ್ಷಿ ಮಂಡಲ) ತಾರಾಪುಂಜದ ನಡುವೆ ಕಾಣಿಸಿಕೊಂಡಿದೆ. ಚಂದ್ರನ ಬೆಳಕಿನಿಂದ ಇದು ಸರಿಯಾಗಿ ಕಾಣಿಸದೇ ಇರಬಹುದು. ಹಾಗಾಗಿ ಚಂದ್ರಮರೆಯಾದ ಬಳಿಕ ಸೂರ್ಯೋದಯಕ್ಕೂ ಮೊದಲು ನೋಡುವಂತೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

You may also like

Leave a Comment