Home » Bengaluru : ಬೆಂಗಳೂರಿನ ಮದರಸಾದಲ್ಲಿ ನೀಚ ಕೃತ್ಯ – ಬಾಲಕಿಯರನ್ನು ಕಚೇರಿಗೆ ಕರೆಸಿ ಮನಬಂದಂತೆ ಥಳಿತ

Bengaluru : ಬೆಂಗಳೂರಿನ ಮದರಸಾದಲ್ಲಿ ನೀಚ ಕೃತ್ಯ – ಬಾಲಕಿಯರನ್ನು ಕಚೇರಿಗೆ ಕರೆಸಿ ಮನಬಂದಂತೆ ಥಳಿತ

0 comments

Bengaluru : ಬೆಂಗಳೂರಿನ ಮದರಸ ಒಂದರಲ್ಲಿ ಬಾಲಕಿಯರನ್ನು ಹಿಗ್ಗಾಮುಗ್ಗ ತಿಳಿಸಿದಂತಹ ಅಘಾತಕಾರಿ ಘಟನೆ ಎಂದು ಬೆಳಕಿಗೆ ಬಂದಿದೆ.

ಹೌದು, ಬೆಂಗಳೂರಿನ ಥಣಿಸಂದ್ರದಲ್ಲಿ ಮೊಹಮ್ಮದ್ ಹಸನ್ ಈ ಮದರಸ ನಡೆಸ್ತಿದ್ದು, ಈತನ ಸಹೋದರಿ ನಿಶಾ ಪ್ರಾಂಶುಪಾಲೆ ಆಗಿದ್ದಾರೆ. ಈ ಮದರಸಾದಲ್ಲಿ ಮೊಹಮ್ಮದ್ ಹಸನ್ ಎಂಬಾತ ಬಾಲಕಿಯರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ.

ಬಾಲಕಿಯರು ತಪ್ಪು ಮಾಡಿದ್ದಾರೆಂದು ಆರೋಪಿಸಿ ಮೊಹಮ್ಮದ್ ಹಸನ್, ಕಚೇರಿಗೆ ಕರೆದು ನಾಲ್ಕೈದು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾನೆ. ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬಾಲಕಿಯರ ಪೋಷಕರು ಗರಂ ಆಗಿದ್ದಾರೆ.

ಸದ್ಯ ಮದರಸ ಪ್ರಿನ್ಸಿಪಲ್ ಸಹೋದರನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಘಟನೆ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಆರೋಪಿ ಮೊಹಮ್ಮದ್ ಹಸನ್​ನನ್ನು ಬಂಧಿಸಿದ್ದಾರೆ.

You may also like