Elephant: ವಿರಾಜಪೇಟೆ ತಾಲೂಕಿನಲ್ಲೆ ಗಿರಿಕಿ ಹೊಡೆಯುತ್ತಿರುವ ಆನೆಗಳ ಹಿಂಡು ಮುಂಜಾನೆ ಮಡಿಕೇರಿ ವಿರಾಜಪೇಟೆಯ ಮುಖ್ಯರಸ್ತಯ ಬೇತ್ರಿಯಲ್ಲಿ ಅಡಿಕೆ ತೋಡದಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿಂದ ಇದೀಗ ಕದನೂರು ಗ್ರಾಮದ ಪಾಲೇಕಂಡ ದೇವಯ್ಯ, ಪಾಲೇಕಂಡ ಅಚ್ಚಯ್ಯ, ಪಾಲೇಕಂಡ ಪೊನ್ನಪ್ಪ ಅವರಿಗೆ ಸೇರಿದ ಅಡಿಕೆ ಹಾಗೂ ಮಿಶ್ರ ಬೆಳೆ ತೋಟದಲ್ಲಿ ಮೂರು ಕಾಡನೆಗಳು(Elephant) ಕಾಣಿಸಿಕೊಂಡಿದ್ದು ಅಪಾರ ನಷ್ಟವನ್ನುಂಟು ಮಾಡಿದೆ. ತೋಟದಲ್ಲಿ ಕಾಯಿ ಬಿಟ್ಟ ಬಾಳೆ ಗೊನೆಗಳನ್ನು,ಅದಿಕೆ ಹಾಗು ತೆಂಗಿನ ಮರಗಳನ್ನು ನಾಶ ಪಡಿಸಿ ಬಾರಿ ನಷ್ಟವನ್ನು ಉಂಟು ಮಾಡಿರುವ ಘಟನೆ ನಡೆದಿದೆ.
ಮುಂಜಾನೆ ಮಡಿಕೇರಿ ವಿರಾಜಪೇಟೆಯ ಮುಖ್ಯರಸ್ತಯ ಬೇತ್ರಿಯಲ್ಲಿ ಮುಕ್ಕಾಟ್ಟಿರ ಕಿಟ್ಟು ಮುತಣ್ಣ ಅವರ ಅಡಿಕೆ ಹಾಗೂ ಮಿಶ್ರ ಬೆಳೆ ತೋಟದಲ್ಲಿ ಕಾಡನೆಗಳು ಕಾಣಿಸಿಕೊಂಡಿದ್ದವು. ಎರಡು ಆನೆಗಳೊಂದಿಗೆ ಮರಿ ಆನೆ ಕೂಡ ಇದ್ದು ಗ್ರಾಮಸ್ಥರು ಆನೆಗಳನ್ನು ಮುಂದೆ ಅಟ್ಟುವ ಕಾರ್ಯಕ್ಕೆ ಮುಂದಾಗಿದ್ದರು. ಅಲ್ಲಿಂದ ಜಾಗ ಖಾಲಿ ಮಾಡಿದ ಆನೆ ಇದೀಗ ಕದನೂರು ಗ್ರಾಮದ ಕಡೆ ಸಾಗಿ ಅಪಾರ ಬೆಳೆ ಹಾನಿ ಮಾಡಿದೆ.
