Viral Video : ಮನುಷ್ಯರು ಎಷ್ಟು ಕ್ರೂರಿಗಳೆಂಬುದನ್ನು ಮಾತು ಬಾರದ ಮೂಕ ಪ್ರಾಣಿಗಳೊಂದಿಗೆ ಹೇಗೆಲ್ಲಾ ವರ್ತಿಸುತ್ತಾರೆ ಎಂಬುದೇ ತೋರಿಸಿಕೊಡುತ್ತದೆ. ಕೆಲವು ದಿನಗಳ ಹಿಂದಷ್ಟೇ ವ್ಯಕ್ತಿ ಓರ್ವ ನೀನು ಒಂದಕ್ಕೆ ಬಿಯರ್ ಕುಡಿಸಿ ಹುಚ್ಚಾಟ ಮೆರೆದಿದ್ದ. ಈ ಬೆನ್ನಲ್ಲೇ ಇನ್ನೊಬ್ಬ ಆಸಾಮಿ ಮದುವೆಯಲ್ಲಿ ಮೆರವಣಿಗೆ ತಂದ ಕುದುರೆಗೆ ಸಿಗರೇಟ್ ಸೇರಿಸಿ ಚಿತ್ರಹಿಂಸೆ ನೀಡಿದ್ದಾನೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಹೌದು, ಇಟ್ಸ್ ಜೀನ್‌ವಾಲ್ ಶಾಬ್’ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ತನ್ನ ಬೂಟುಗಾಲಿನಲ್ಲಿ ಕುದುರೆಯ ಮೇಲೆ ಹತ್ತಿ, ಅದರ ದೇಹದ ಮೇಲೆ ಪುಷ್-ಅಪ್ ಮಾಡುತ್ತಿರುವುದು ಕಂಡುಬಂದಿದೆ. ಮದುವೆಯ ಸಂಭ್ರಮದಲ್ಲಿ ಪ್ರಾಣಿ ಹಿಂಸೆಯ ದೃಶ್ಯಗಳು ದಾಖಲಾಗಿವೆ, ಅಲ್ಲಿ ಜನರು ಕುದುರೆಯ ಮೇಲೆ ಪುಷ್-ಅಪ್ ಮಾಡಲು ಒಬ್ಬರನ್ನೊಬ್ಬರು ಎಳೆದು ಪ್ರೋತ್ಸಾಹಿಸುತ್ತಿದ್ದಾರೆ. ಪಾಪ ಮಲಗಿರುವ ಕುದುರೆಯು ಅಸಹಾಯಕತೆಯಿಂದ ಬಳಲುತ್ತಿದೆ.
ಕುದುರೆಯ ಬಾಯಿಯಲ್ಲಿ ಸಿಗರೇಟ್ ಇಟ್ಟು ಸೇದಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ನೆಲದ ಮೇಲೆ ಮಲಗಿರುವ ಪ್ರಾಣಿಗೆ ಬಲವಂತವಾಗಿ ಸಿಗರೇಟ್ ಸೇದಿಸಲಾಗಿದೆ. ಮದುವೆಯಲ್ಲಿ ಭಾಗವಹಿಸಿದ್ದ ಯಾವ ಅತಿಥಿಯೂ ದುಷ್ಕರ್ಮಿ ಯುವಕರ ಕೃತ್ಯಗಳನ್ನು ಪ್ರಶ್ನಿಸಿಲ್ಲ. ಅವರೆಲ್ಲರೂ ನೃತ್ಯ ಮತ್ತು ಪ್ರಾಣಿಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನೋಡಿ ಆನಂದ ಪಟ್ಟಿದ್ದಾರೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ವಾಚಾಮಗೋಚರವಾಗಿ ತಮ್ಮ ಕಾಮೆಂಟ್ ಗಳನ್ನು ಕಮೆಂಟಿಸಿದ್ದಾರೆ.
