7
Mandya: ಮೂರು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಯುವಕ ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ. ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್ ಪುತ್ರ ಶಶಾಂಕ್ (28) ಮೃತ ಯುವಕ.
ಶಶಾಂಕ್ ಖಾಸಗಿ ಕಂಪನಿಯಲ್ಲಿ ಐಟಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದು, ಜಾರ್ಖಂಡ್ ಮೂಲದ ಯುವತಿ ಅಷ್ಣಾ ಎಂಬಾಕೆಯನ್ನು ಪ್ರೀತಿಸಿ ಕಳೆದ ಭಾನುವಾರ ಮೈಸೂರಿನ ರೆಸಾರ್ಟ್‌ನಲ್ಲಿ ಮದುವೆ ಕೂಡಾ ಮಾಡಿಕೊಂಡಿದ್ದರು.
ಮದುವೆ ದಿನ ಮದುಮಗ ಶಶಾಂಕ್ ಜ್ವರದಿಂದ ಬಳಲುತ್ತಿದ್ದ, ಈ ಕುರಿತು ಸ್ನೇಹಿತರಲ್ಲಿ ಹೇಳಿದ್ದ. ಮಂಗಳವಾರ (ಮಾ.04) ಬೆಂಗಳೂರಿನ ನಿವಾಸದಲ್ಲಿ ಶಶಾಂಕ್‌ಗೆ ಎದೆನೋವು ಕಾಣಿಸಿದೆ. ಆಸ್ಪತ್ರೆಗೆ ಕೂಡಲೇ ದಾಖಲು ಮಾಡಲಾಗಿದ್ದು, ಅಷ್ಟರಲ್ಲಿ ಶಾಂಕರ್ ಮೃತಪಟ್ಟಿದ್ದರು.
