6
Shimogga: ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳ ತಂಡ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಕುಂಸಿಯಲ್ಲಿ ಭಾನುವಾರ ರಾತ್ರಿ (ಜೂ.29) ನಡೆದಿದೆ. ಅಕ್ರಮ ಸಂಬಂಧವೇ ಈ ಕೊಲೆ ಕಾರಣ ಎನ್ನಲಾಗಿದೆ.
ಕುಂಸಿ ನಿವಾಸಿ ವಸಂತ್ (32) ಕೊಲೆಯಾದ ವ್ಯಕ್ತಿ.
ಭಾನುವಾರ ರಾತ್ರಿ ವಸಂತ್‌ನನ್ನು ದುಷ್ಕರ್ಮಿಗಳ ತಂಡ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ತಲೆ, ಕೈಗಳಿಗೆ ಗಂಭೀರ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿಯೇ ವಸಂತ್ ಬಿದ್ದು ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಕುಂಸಿ ಪೊಲೀಸರು ಭೇಟಿ ನೀಡಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ: RBI Gold Treasury: ಮೊದಲ ಬಾರಿಗೆ ಆರ್‌ಬಿಐ ಚಿನ್ನದ ಖಜಾನೆಯ ವಿಶೇಷ ಸಾಕ್ಷ್ಯಚಿತ್ರ ಬಿಡುಗಡೆ
