4
Bengaluru : ತಂದೆಯ ಹುಟ್ಟು ಹಬ್ಬ ಆಚರಣೆಗೆ ತಲೆ ಮಾಂಸ ಮಟನ್ ತರಲು ಹೋಗುತ್ತಿದ್ದ ವೇಳೆ ಮರದ ಕೊಂಬೆಯೊಂದು ಬಿದ್ದು ತಲೆಗೆ ಗಂಭೀರವಾಗಿ ಗಾಯವಾದ ಘಟನೆ ಬನಶಂಕರಿ 2 ನೇ ಹಂತದ ಶ್ರೀನಿವಾಸಪುರದಲ್ಲಿ ನಡೆದಿದೆ.
ಅಕ್ಷಯ್ ಎಂಬಾತ ತಂದೆಯ ಹುಟ್ಟು ಹಬ್ಬಕ್ಕೆಂದು ಮಟನ್ ತರಲು ಬೈಕ್ ನಲ್ಲಿ ಹೋಗುತ್ತಿದ್ದ. ಈ ಸಂಧರ್ಭ ಭಾರೀ ಗಾಳಿ ಬಂದು ಮರದ ಕೊಂಬೆಯೊಂದು ತಲೆಯ ಮೇಲೆ ಬಿದ್ದಿದೆ. ಪರಿಣಾಮ ತಲೆಯ ಚಿಪ್ಪು 17 ಚೂರುಗಳಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ತಲೆಗೆ ಕೊಂಬೆ ಬೀಳುತ್ತಿದ್ದಂತೆ ದಾರಿಹೋಕರು ತಲೆಗೆ ಬಟ್ಟೆ ಕಟ್ಟಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅಕ್ಷಯ್ ಆಪರೇಷನ್ ಮಾಡಿದ್ದು, 17 ಚೂರು ಬಿರುಕಾಗಿದ್ದ ಚಿಪ್ಪನ್ನು ಮತ್ತೆ ಜೋಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಆತನ ಸ್ಥಿತಿ ಚಿಂತಾಜನಕವಾಗಿದೆ.
