Suicide: ಕೆಲವು ವರ್ಷಗಳಿಂದ ಅನ್ಯೊನ್ಯವಾಗಿದ್ದ ಜೋಡಿ, ನಡುವೆ ಕಲಹ ಏರ್ಪಟ್ಟು ನೊಂದ ವ್ಯಕ್ತಿಯು ನೇಣಿಗೆ ಶರಣಾದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ.
ವಿರಾಜಪೇಟೆ ನಗರದ. ಕೆ. ಬೋಯಿಕೇರಿ ಗ್ರಾಮದ ನಿವಾಸಿ ದಿವಂಗತ ನಾಗರಾಜು ಎಂಬುವವರ ಪುತ್ರ ಸಾಗರ್ ಸೆಸ್ಕಾಂ ಇಲಾಖೆಯಲ್ಲಿ ವಿದ್ಯುತ್ ಕಂಬ ಅಳವಡಿಸುವ ಕಾಯಕ ಮಾಡುತಿದ್ದ,ಅಲ್ಲದೆ ಆಟೊ ಚಾಲನೆ ಮಾಡುತಿದ್ದ. ಈತನಿಗೆ ಸಾವಿತ್ರಿ ಎಂಬ ಮಹಿಳೆಯ ಪರಿಚಯವಾಗಿ, ನಂತರ ಗಾಂಧಿನಗರದಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ಸುಮಾರು 18 ವರ್ಷಗಳಿಂದ ಜೀವನ ನಡೆಸುತಿದ್ದ. ಲಿವಿಂಗ್ ಟುಗೆದರ್ ರೀತಿಯಲ್ಲಿ ಇವರು ಒಟ್ಟಿಗೆ ಬದುಕುತ್ತಿದ್ದರು. ಅಲ್ಪ ಪ್ರಮಾಣದಲ್ಲಿ ಕುಡಿತದ ಚಟವು ಇತ್ತು. ಎರಡು ದಿನಗಳ ಹಿಂದೆ ಸಾಗರ್ ಮತ್ತು ಆ ಮಹಿಳೆಯ ಮಧ್ಯೆ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.
ದಿನಾಂಕ 02-07-2025 ರಂದು ಮಹಿಳೆಯೊಂದಿಗೆ ಕಲಹ ನಡೆದು ಮನನೊಂದು ಕೇರಳ ರಾಜ್ಯದ ಕೊಟ್ಟಿಯೂರು ದೇವಾಲಯಕ್ಕೆ ಒಬ್ಬನೇ ತೆರಳಿ ನಂತರ ಮನೆಗೆ ಸಂಜೆ 6 ರ ವೇಳೆಗೆ ಹಿಂದಿರುಗಿದ್ದಾನೆ. ಮನೆಗೆ ಬಂದ ವೇಳೆಯಲ್ಲಿ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಮಹಿಳೆಗೆ ಹಲವು ಬಾರಿ ದೂರವಾಣಿ ಕರೆ ಮಾಡಿದ್ದಾನೆ. ಮಹಿಳೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಮಹಿಳೆ ನನ್ನನ್ನು ಬಿಟ್ಟು ತೆರಳಿದ್ದಾಳೆ, ನನ್ನಿಂದ ದೂರವಾಗಿದ್ದಾಳೆ ಎಂದು ಭಾವಿಸಿ ತನ್ನ ಸಾವು ಖಚಿತ ಪಡಿಸಿಕೊಂಡು ವಿಡಿಯೋ ಚಿತ್ರಣ ಮಾಡುವಲ್ಲಿ ತಲ್ಲಿನನಾಗುತ್ತಾನೆ ” ನನ್ನ ಸಾವನ್ನು ಸಂತೋಷದಿಂದ ಸ್ವೀಕರಿಸು. ಮನೆಗೆ ಬರುವ ವೇಳೆ ನಾನು ಇರುವುದಿಲ್ಲ ಎಂದು ವಿಡಿಯೋ ಚಿತ್ರೀಕರಿಸಿದ್ದಾನೆ.
ನಂತರ ಮದ್ಯ ಸೇವನೆ ಹಾಗೂ ಧೂಮಪಾನ ಮಾಡಿ ನಂತರ ನೇಣಿಗೆ ಶರಣಾಗುವ ವಿಡಿಯೋ ತುಣುಕು ವೈರಲ್ ಅಗಿದೆ. ಆದರೆ ಮಹಿಳೆ ಕಲಹದಿಂದ ಪೆಟ್ಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಳು. ಮಹಿಳೆಯ ಮಗ ಆಧಾರ್ ಕಾರ್ಡ್ ತರಲೆಂದು ಮನೆಗೆ ಬಂದು ನೋಡಿದ ಸಂಧರ್ಭ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ . ಮೃತನ ತಾಯಿ ಎನ್.ಎನ್. ಸರೋಜ ಅವರು ನೀಡಿರುವ ದೂರಿನ ಅನ್ವಯ ವಿರಾಜಪೇಟೆ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Kodagu: ಚಿಕಿತ್ಸೆ ಫಲಿಸದೆ ಯುವ ವೈದ್ಯ ಡಾ. ಶಮಂತ್ ನಿಧನ!!
