Home » Sullia: ಸುಳ್ಯದ ವೈದ್ಯ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಮೃತ್ಯು!

Sullia: ಸುಳ್ಯದ ವೈದ್ಯ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಮೃತ್ಯು!

0 comments

Sullia: ವಿದ್ಯಾರ್ಥಿಯೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕೇರಳದ ಕಣ್ಣೂರಿನಲ್ಲಿ ಜು. 20 ರಂದು ನಡೆದಿದೆ.

ಮೃತಪಟ್ಟ ಯುವಕನನ್ನು ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಬಾಳಿಕಲ ನಿವಾಸಿ, ಸುಳ್ಯದ (Sullia)ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಡಾ.ನಂದ ಕುಮಾ‌ರ್ ಅವರ ಪುತ್ರ, ಮಂಗಳೂರಿನ ಖಾಸಗಿ ಡೆಂಟಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ದಂತ ವಿಜ್ಞಾನ ಕಲಿಯುತ್ತಿದ್ದ ಆಸ್ತಿಕ್ ರಾಘವ್ (19) ಎಂದು ಗುರುತಿಸಲಾಗಿದೆ.

ಆಸ್ತಿಕ್ ರಾಘವ್ ಮಂಗಳೂರಿನಿಂದ ತನ್ನ ಗೆಳೆಯನೊಂದಿಗೆ ಕೇರಳದ ಕಣ್ಣೂರಿನ ಸಹಪಾಠಿ ಮನೆಗೆ ರವಿವಾರ ಬೆಳಿಗ್ಗೆ ಹೋಗಿದ್ದಾರೆ. ಬಳಿಕ ಅವರು ಮನೆ ಪಕ್ಕದ ಕೆರೆಗೆ ಸ್ನಾನಕ್ಕೆ ಹೋದಾಗ ಆಸ್ತಿಕ್ ಕಾಲು ಜಾರಿ ನೀರಿಗೆ ಬಿದ್ದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Biklu Shiva case: ಬಿಕ್ಲು ಶಿವ ಕೊಲೆ ಆರೋಪಿಗೆ ರಾಜಕಾರಣಿ ಅಷ್ಟೆ ಅಲ್ಲ ಸಿನಿಮಾ ನಂಟು – ಆರೋಪಿಯಿಂದ ಡಿಂಪಲ್ ಕ್ವೀನ್ ಗೆ ಚಿನ್ನಾಭರಣ ಗಿಫ್ಟ್! ನಿಜಾನಾ?

You may also like