Tirupati: ಪ್ರತಿದಿನ ಲಕ್ಷಾಂತರ ಜನರು ಭೇಟಿ ನೀಡುವ ತಿರುಪತಿ (Tirupati) ತಿರುಮಲ ವೆಂಕಟೇಶ್ವರನ ದೇವಸ್ಥಾನದಲ್ಲಿ ಇನ್ನು ಮುಂದೆ ಲಡ್ಡು ಪ್ರಸಾದ ಕೊಳ್ಳಲು ಲಡ್ಡು ಕೌಂಟರ್ ನಲ್ಲಿ ಉದ್ದನೆಯ ಸರದಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಬದಲಾಗಿ ಇನ್ನು ಮುಂದೆ ಕಿಯೋಸ್ಕ್ ನಲ್ಲಿ ಡಿಜಿಟಲ್ ಆಗಿ ಟಿಕೆಟ್ ಪಡೆಯಬಹುದಾಗಿದೆ.
ದರ್ಶನದ ಟಿಕೆಟ್ ನಂಬರ್ ಹಾಕಿ, ಲಡ್ಡು ಸಂಖ್ಯೆ ಆಯ್ಕೆ ಮಾಡಿ UPI ಮೂಲಕ ಪೇಮೆಂಟ್ ಮಾಡಬೇಕು. ದರ್ಶನ ಟಿಕೆಟ್ ಇಲ್ಲದವರು ಆಧಾರ್ ನಂಬರ್ ಬಳಸಿ ಪ್ರಸ್ತುತ ಎರಡು ಲಡ್ಡು ಪಡೆಯಬಹುದಾಗಿದೆ.
ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್ ಕಿಯೋಸ್ಕ್ ಗಳು ಲಡ್ಡು ಕೌಂಟರ್ ಗಳ ಬಳಿ ಇದ್ದು MBC ವಿಚಾರಣಾ ಕೇಂದ್ರ, CRO ಕೇಂದ್ರ, ಶ್ರೀ ಪದ್ಮಾವತಿ ಗೆಸ್ಟ್ ಹೌಸ್ ಗಳಲ್ಲೂ ಕಿಯೋಸ್ಕ್ ಗಳು ಬರಲಿದೆ. ಸೆಪ್ಟೆಂಬರ್ ತಿಂಗಳ ದರ್ಶನ ಟಿಕೆಟ್ ಗಳು ಜೂನ್ 23ರಂದು ಆನ್ಸೆನ್ ನಲ್ಲಿ ಬಿಡುಗಡೆಯಾಗಿದ್ದು, ಅಂಗಪ್ರದಕ್ಷಿಣೆ, ಶ್ರೀ ವಾಣಿ ದರ್ಶನ, ವೃದ್ಧರು ಮತ್ತು ವಿಶೇಷ ಚೇತನರಿಗೆ ಟಿಕೆಟ್ಗಳು ಲಭ್ಯವಿರಲಿದೆ.
ಇದನ್ನೂ ಓದಿ: Udupi: ಉಡುಪಿ ಶಾಲೆಗೆ ಬಾಂಬ್ ಬೆದರಿಕೆ ಪ್ರಕರಣ: ಚೆನ್ನೈ ಮೂಲದ ಇಂಜಿನಿಯರ್ ಯುವತಿ ಅರೆಸ್ಟ್
