Home » Viral Video : ಹಾವಿನ ತಲೆ ಸೀಳಿ ಹೊರಬಂತು ಅಮೂಲ್ಯ ರತ್ನ – ‘ನಾಗಮಣಿ’ ಸುಳ್ಳು ಎಂಬುವರು ಈ ವಿಡಿಯೋ ನೋಡಿ

Viral Video : ಹಾವಿನ ತಲೆ ಸೀಳಿ ಹೊರಬಂತು ಅಮೂಲ್ಯ ರತ್ನ – ‘ನಾಗಮಣಿ’ ಸುಳ್ಳು ಎಂಬುವರು ಈ ವಿಡಿಯೋ ನೋಡಿ

by V R
0 comments

Viral Video : ಪುರಾಣದಲ್ಲಿ, ಕಥೆಗಳಲ್ಲಿ ಹಾಗೂ ಕೆಲವು ಸಿನಿಮ ಧಾರವಾಹಿಗಳಲ್ಲಿ ನಾವು ನಾಗರ ಹಾವಿನ ತಲೆಯ ಮೇಲೆ ನಾಗಮಣಿ ಅಥವಾ ಯಾವುದೋ ಒಂದು ಅಮೂಲ್ಯ ರತ್ನ ಇರುವ ಬಗ್ಗೆ ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ ನಿಜ ಜೀವನದಲ್ಲಿ ಇದು ಸುಳ್ಳು ವಾಸ್ತವವಾಗಿ ನಾಗರ ಹಾವಿನ ಮೇಲೆ ಯಾವುದೇ ರೀತಿಯ ನಾಗಮಣಿ ಇರುವುದಿಲ್ಲ ಎಂದು ಪುರಗತಜ್ಞರು ಅಥವಾ ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ಇದೀಗ ಅಚ್ಚರಿಯ ವಿಡಿಯೋ ಒಂದು ವೈರಲ್ ಆಗಿದ್ದು, ನಾಗಮಣಿ ಇರುವುದು ಸುಳ್ಳು ಎಂಬುವರು ಈ ವಿಡಿಯೋವನ್ನು ನೋಡಲೇಬೇಕಾಗಿದೆ.

ವೈರಲ್ ಆದ ವಿಡಿಯೋದಲ್ಲಿ, ಹೊಲಗಳ ನಡುವಿನ ಕಾಲುದಾರಿಯಲ್ಲಿ ನಾಗರಹಾವು ಒಂದು ಕಾಣಿಸಿಕೊಳ್ಳುತ್ತದೆ. ಆ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಹಾವನ್ನು ತಡೆಯುತ್ತಾನೆ. ಹಾವು ಸುರುಳಿಯಾಗಿ ಸುತ್ತಿಕೊಂಡು ಹಿಂದಕ್ಕೆ ಸರಿಯುತ್ತದೆ. ಹಾವು ರಸ್ತೆ ದಾಟಲು ಪ್ರಯತ್ನಿಸಿದಾಗ, ಆ ವ್ಯಕ್ತಿ ಅದರ ಬಾಲವನ್ನು ಹಿಡಿದು ರಸ್ತೆಗೆ ಎಳೆಯುತ್ತಾನೆ. ಆಗ ಹಾವು ಕಚ್ಚಲು ಪ್ರಯತ್ನಿಸಿದರೂ, ವ್ಯಕ್ತಿ ಜಾಣತನದಿಂದ ತಪ್ಪಿಸಿಕೊಂಡು ಆ ವ್ಯಕ್ತಿ ಹಾವಿನ ತಲೆಯನ್ನು ಚಾಕುವಿನಿಂದ ಕತ್ತರಿಸಿ, ಅದರೊಳಗಿಂದ ಸಣ್ಣ ರತ್ನದಂತಹ ವಸ್ತುವನ್ನು ಹೊರತೆಗೆಯುತ್ತಾನೆ. ತದನಂತರ ಹಾವನ್ನು ಹೋಗಲು ಬಿಡುತ್ತಾನೆ.

ಈ ವಿಡಿಯೋ, ಹಳೆಯದಾದರೂ ಇತ್ತೀಚೆಗೆ ಮತ್ತೆ ವೈರಲ್ ಆಗಿದ್ದು,. ಈ ದೃಶ್ಯವನ್ನು ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. “ಇದು ನಿಜವಾಗಿಯೂ ನಾಗಮಣಿಯೇ?” ಎಂದು ಕಾಮೆಂಟ್‌ಗಳ ಮೂಲಕ ಚರ್ಚೆಯನ್ನು ಆರಂಭಿಸಿದ್ದಾರೆ. ಕೆಲವರು ಇದನ್ನು ಸತ್ಯ ಎಂದು ನಂಬಿದರೆ, ಇನ್ನು ಕೆಲವರು ಇದು ಕೇವಲ ಕಾಲ್ಪನಿಕ ದೃಶ್ಯವಿರಬಹುದು ಎಂದು ವಾದಿಸಿದ್ದಾರೆ. ಆದರೆ ಈ ವಿಡಿಯೋವನ್ನು ನೋಡಿದಾಗ ಇದು ನಿಜವಾದ ವಿಡಿಯೋ ಎಂದು ತಿಳಿಯುತ್ತದೆ. ಯಾಕೆಂದರೆ ಇದರಲ್ಲಿ ಎಡಿಟ್ ಮಾಡಿದ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಒಟ್ಟಿನಲ್ಲಿ ಇದರ ಸತ್ಯ ಅಂಶ ಮುಂದೆ ತಿಳಿಯಬೇಕಷ್ಟೇ.

You may also like