Home » Bengaluru: ರೇಣುಕಾ ಸ್ವಾಮಿ ರೀತಿ ಯುವಕನಿಗೆ ಹಲ್ಲೆ ಕೇಸ್ – ಪವಿತ್ರಾ ಗೌಡ ರೀತಿಯಲ್ಲೇ ಸಂಚು ಹೂಡಿದ್ದ 17ರ ಯುವತಿ ಅರೆಸ್ಟ್

Bengaluru: ರೇಣುಕಾ ಸ್ವಾಮಿ ರೀತಿ ಯುವಕನಿಗೆ ಹಲ್ಲೆ ಕೇಸ್ – ಪವಿತ್ರಾ ಗೌಡ ರೀತಿಯಲ್ಲೇ ಸಂಚು ಹೂಡಿದ್ದ 17ರ ಯುವತಿ ಅರೆಸ್ಟ್

by V R
0 comments

Bengaluru : ಹುಡುಗಿಯ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿತ್ತು. ರಾಕ್ಷಸರಂತೆ ವರ್ತಿಸಿದ ಇವರಿಗೆ ದರ್ಶನ್ ಸ್ಪೂರ್ತಿ ಎಂದು ಹೇಳಲಾಗುತ್ತಿದ್ದು, ನೀನು ರೇಣುಕಾ ಸ್ವಾಮಿ ರೀತಿ ಸಾಯ್ತಿಯ ಎಂದು ಯುವಕನಿಗೆ ರೇಣುಕಾ ಸ್ವಾಮಿ ಹೆಸರಲ್ಲಿ ಹಲ್ಲೆ ಮಾಡಿದ್ದರು. ಒಬ್ಬನ ಮೇಲೆ 8 ರಿಂದ 10 ಜನ ದುಷ್ಕರ್ಮಿಗಳು ಮುಗಿಬಿದ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಕೋಲುಗಳಿಂದ ಯುವಕನಿಗೆ ಮನಸೋ ಇಚ್ಛೆ ಥಳಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರ ಗೌಡ ರೀತಿ ಸ್ಕೆಚ್ ಹಾಕಿದ್ದ ಯುವತಿ ಅರೆಸ್ಟ್ ಆಗಿದ್ದಾಳೆ.

ಹೌದು, ಹುಡುಗಿ ವಿಚಾರಕ್ಕೆ ಕುಶಾಲ್‌ ಎನ್ನುವ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಲಾಗಿದೆ. ಕಾಲೇಜಿಗೆ ಹೋಗುವಾಗ ಕುಶಾಲ್ ಹಾಗೂ ಯುವತಿ ಮಧ್ಯೆ ಪ್ರೀತಿ ಮೂಡಿತ್ತು.ಎರಡು ವರ್ಷದ ಪ್ರೀತಿ ಕೆಲ ತಿಂಗಳ ಹಿಂದೆ ಮುರಿದು ಬಿದ್ದಿತ್ತು. ಈ ವೇಳೆ ಯುವತಿಗೆ ಬೇರೊಂದು ಹುಡುಗನ ಪರಿಚಯವಾಗಿತ್ತು. ಇದನ್ನು ಸಹಿಸಲಾಗದ ಕುಶಾಲ್ ಯುವತಿಗೆ ಅಶ್ಲೀಲ ಮೆಸೆಜ್ ಮಾಡಿದ್ದ. ಈ ವಿಚಾರವನ್ನು ಹುಡುಗಿ ತನ್ನ ಸ್ನೇಹಿತರ ಮುಂದೆ ಹೇಳಿದ್ದಾಳೆ. ಅಲ್ಲದೆ, ಕುಶಾಲ್ನನ್ನು ಅಪಹರಿಸುವಂತೆ ಹುಡುಗಿ ತನ್ನ ಸ್ನೇಹಿತರಿಗೆ ಹೇಳಿದ್ದಾಳೆ. ಅದರಂತೆ ಹುಡುಗಿಯ ಸ್ನೇಹಿತರು, ಕುಶಾಲ್ನನ್ನು ಸಂಪರ್ಕಿಸಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಬಾ ಅಂತ ಬಾಗಲಗುಂಟೆಯ ಎಜಿಪಿ ಲೇಔಟ್ಗೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಯುವಕ ಕುಶಾಲ್ನನ್ನು ಹುಡುಗಿಯ ಸ್ನೇಹಿತರು ಅಪಹರಿಸಿ ಮನ ಬಂದಂತೆ ಥಳಿಸಿ ಹಲ್ಲೆ ನಡೆಸಿದ್ದಾರೆ.

ಅಲ್ಲದೆ ರೇಣುಕಾಸ್ವಾಮಿ ಕೊಲೆ ಕೇಸ್ ನಂತೆ ಇದೂ ಆಗತ್ತೆ..’ ಎಂದು ವಿಡಿಯೋ ಮಾಡಿದ್ದಲ್ಲದೆ, ‘ಎ1 ಹೇಮಂತ ಎ2 ನಾನು..’ ಎಂದು ವಿಡಿಯೋ ಮಾಡಿದ್ದಾರೆ. 8-10 ಯುವಕರಿಂದ ಬಟ್ಟೆ ಬಿಚ್ಚಿ ಹಲ್ಲೆ ಮಾಡಲಾಗಿದೆ. ಯುವಕನನ್ನ ಬೆತ್ತಲೆ ಮಾಡಿ ಕೀಚಕರು ಹಲ್ಲೆ ಮಾಡಿದ್ದಲ್ಲದೆ, ಆತನ ಮರ್ಮಾಂಗ ತುಳಿದು ವಿಕೃತಿ ಮರೆದಿದ್ದರು. ಕೇಸ್ಗೆ ಸಂಬಂಧಿಸಿದಂತೆ ಪ್ರಕರಣದ ಸೂತ್ರಧಾರಿ 17 ವರ್ಷದ ಹುಡಗಿಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೊತೆಗೆ ಪ್ರಕರಣ ಸಂಬಂಧ ಹುಡುಗಿ ಸೇರಿದಂತೆ 11 ಜನರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ 8 ಜನ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆರೋಪಿಗಳಾದ ಶಶಾಂಕ್ ಗೌಡ, ಸಲ್ಮಾನ್, ಯಶ್ವಂತ್, ವಿದ್ಯಾರ್ಥಿಗಳಾದ ತೇಜಸ್, ರಾಕೇಶ್, ರಾಹುಲ್ ಮತ್ತು ಹೇಮಂತ್ ಬಿಡುಗಡೆಯಾದವರು. ಆರೋಪಿ ಹೇಮಂತ ಈ ಹಿಂದೆ ಹಲವು ಬಾರಿ ಹಲ್ಲೆ ಪ್ರಕರಣದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿ ಬಂದಿದ್ದಾನೆ.

ಇದನ್ನೂ ಓದಿ: Death: ಚಲಿಸುತ್ತಿದ್ದ ರೈಲಿನಲ್ಲಿ ‘ಸ್ಟಂಟ್’ ಮಾಡಲು ಹೋಗಿ ಯುವಕ ಸಾವು!

You may also like