Home » Scorpion bite: ಸ್ಟಾರ್ ಹೋಟೆಲ್‌ನಲ್ಲಿ ಹಾಯಾಗಿ ಮಲಗಿದ್ದ ವ್ಯಕ್ತಿಯ ಖಾಸಗಿ ಭಾಗಕ್ಕೆ ಕಚ್ಚಿದ ಚೇಳು!

Scorpion bite: ಸ್ಟಾರ್ ಹೋಟೆಲ್‌ನಲ್ಲಿ ಹಾಯಾಗಿ ಮಲಗಿದ್ದ ವ್ಯಕ್ತಿಯ ಖಾಸಗಿ ಭಾಗಕ್ಕೆ ಕಚ್ಚಿದ ಚೇಳು!

244 comments

Scorpion bite: ಕೆಲವೊಮ್ಮೆ ಗ್ರಹಚಾರ ಅನ್ನೋದು ಎಲ್ಲಿ ಹೇಗೆ ಇದ್ದರೂ ವಕ್ಕರಿಸುತ್ತೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ. ಹೌದು, ಅಮೆರಿಕದ ವ್ಯಕ್ತಿಯೊಬ್ಬ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದಾಗ ಆತನ ಖಾಸಗಿ ಭಾಗಕ್ಕೆ ಚೇಳು ಕಚ್ಚಿದ್ದು (Scorpion bite) , ಇದರಿಂದ ಆತನ ಸಾಂಸರಿಕ ಜೀವನವೇ ಹಾಳಾಗಿದೆ ಎಂದು ಆರೋಪಿಸಿ ಹೋಟೆಲ್ ವಿರುದ್ಧ ದೂರು ದಾಖಲಿಸಿದ್ದಾರೆ.

ಅಮೆರಿಕಾದ ಲಾಸ್ ವೆಗಾಸ್‌ನಲ್ಲಿರುವ ವೆನೆಶಿಯನ್ ರೆಸಾರ್ಟ್‌ನಲ್ಲಿ ಮೈಕಲ್ ಫಾರ್ಚಿ ಅವರು ಉಳಿದುಕೊಂಡಿದ್ದು, ಹಾಯಾಗಿ ರಾತ್ರಿ ಮಲಗಿದ್ದಾಗ ಇದ್ದಕ್ಕಿದಂತೆ ಖಾಸಗಿ  ಭಾಗದಲ್ಲಿ ನೋವು ಶುರುವಾಗಿದೆ. ಎದ್ದು ನೋಡಿದಾಗ ಚೇಳು ಅವರ  ಗುಪ್ತ ಅಂಗವನ್ನು ಕಚ್ಚುತ್ತಿತ್ತು. ಮೈಕೆಲ್ ದಾಖಲಿಸಿದ ದೂರಿನ ಪ್ರಕಾರ, ತೋಳು ಹಾಗೂ ತೊಡೆಯ ಸಂದಿನಲ್ಲಿ ಚೇಳು ಹಲವು ಬಾರಿ ಕಚ್ಚಿದೆ.

ಮಾಹಿತಿ ಪ್ರಕಾರ, 62 ವರ್ಷದ ಮೈಕಲ್, ಲಾಸ್ ವೆಗಾಸ್‌ನಲ್ಲಿರುವ ವೆನೆಶಿಯನ್ ರೆಸಾರ್ಟ್‌ ಕೀಟ ಹಾಗೂ ಸೊಳ್ಳೆಗಳಿಂದ ತುಂಬಿದೆ. ಇದೀಗ ಚೇಳು ಕಚ್ಚಿದ್ದರಿಂದ ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ಮತ್ತು ಮಾನಸಿಕವಾಗಿ ನೊಂದಿದ್ದೇನೆ ಎಂದು  ಮೈಕಲ್ ಹೇಳಿಕೊಂಡಿದ್ದಾರೆ. ಅಲ್ಲದೆ ಆ ಭಾಗದಲ್ಲಿ ಚೇಳು ಕಚ್ಚಿದ್ದರಿಂದ ನಮ್ಮ ಸಾಂಸರಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಮೈಕಲ್ ಮತ್ತು ಪತ್ನಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಕೋರ್ಟ್ ನಲ್ಲಿ ವಾದ ಮಾಡುವಾಗ, ತಮ್ಮ ಪ್ರೈವೇಟ್‌ ಪಾರ್ಟ್‌ಗೆ ಚೇಳು ಕಚ್ಚಿದೆ ಅಂತ ಹೇಳಿದ್ರೆ ಹೋಟೆಲ್ ಸಿಬ್ಬಂದಿ ಹಾಸ್ಯ ಮಾಡಿದ್ದಾರೆ. ನಂತರ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಯುಸಿಎಲ್ಎ ಆರೋಗ್ಯ ಕೇಂದ್ರದಲ್ಲಿ ಮೈಕೆಲ್ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಚೇಳು ಕಚ್ಚಿದ್ದರಿಂದ ಖಾಸಗಿ ಭಾಗಗಳಲ್ಲಿ  ಗಾಯ ಮತ್ತು ನಿಮಿರುವಿಕೆ ಸಮಸ್ಯೆಯುಂಟಾಗಿದೆ ಎಂದು ವಕೀಲರು ಹೇಳಿದ್ದಾರೆ.

ಇನ್ನು ನನಗೆ ಭವಿಷ್ಯದಲ್ಲಿ ಚಿಕಿತ್ಸೆಯ ಅಗತ್ಯವಿದ್ದು, ಹಣಕಾಸಿನ ನೆರವು ಬೇಕಿದೆ. ಘಟನೆ ಬಳಿಕ ಮಾನಸಿಕ ಒತ್ತಡದಿಂದ ಬಳಳುತ್ತಿದ್ದೇನೆ, ಆದ್ದರಿಂದ ಮುಂದಿನ ಜೀವನಕ್ಕಾಗಿ ಪರಿಹಾರಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದು, ಅರ್ಜಿಯ ವಿಚಾರಣೆ ನಡೆಯುತ್ತಿದೆ ಎಂದು ಮೈಕಲ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

You may also like

Leave a Comment