Home » Karnataka Rain: ವರುಣಾರ್ಭಟಕ್ಕೆ ಸ್ವಲ್ಪ ಬ್ರೇಕ್‌, ಮುಂದಿನ ವಾರ ಮಳೆ ಇಳಿಮುಖ- ಹವಾಮಾನ ಇಲಾಖೆ ಮುನ್ಸೂಚನೆ

Karnataka Rain: ವರುಣಾರ್ಭಟಕ್ಕೆ ಸ್ವಲ್ಪ ಬ್ರೇಕ್‌, ಮುಂದಿನ ವಾರ ಮಳೆ ಇಳಿಮುಖ- ಹವಾಮಾನ ಇಲಾಖೆ ಮುನ್ಸೂಚನೆ

by Mallika
0 comments
Monsoon Rain

Karnataka Rain: ರಾಜ್ಯದಲ್ಲಿ ವರುಣನ ಆರ್ಭಟ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮುಂದಿನ ಒಂದು ವಾರ ಮಳೆಯ ಪ್ರಮಾಣ ಕಡಿಮೆಯಾಗಲಿದ್ದು, ಗಾಳಿಯ ವೇಗ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

 

ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿದ್ದ ಮಳೆ ಕಳೆದ ಎರಡು ದಿನದಿಂದ ತಗ್ಗಿದೆ. ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ, ಒಳನಾಡು ಜಿಲ್ಲೆಗಳಲ್ಲಿ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿರುವ ಕುರಿತು ಸೂಚನೆ ನೀಡಲಾಗಿದೆ.

 

ಜೂನ್‌ 20, 21 ರಂದು ಕರಾವಳಿ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದ್ದು, ಜೂನ್‌ 20 ರಂದು ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಅತಿ ಸಾಧಾರಣ ಮಳೆ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

You may also like