Home » Kodagu Rain: ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಕೊಂಚ ಬ್ರೇಕ್ – ಕಾವೇರಿ ನದಿ ಹರಿವಿಕೆಯಲ್ಲಿ ಇಳಿಮುಖ                    

Kodagu Rain: ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಕೊಂಚ ಬ್ರೇಕ್ – ಕಾವೇರಿ ನದಿ ಹರಿವಿಕೆಯಲ್ಲಿ ಇಳಿಮುಖ                    

0 comments

Kodagu Rain: ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಮಳೆಗೆ ನಿನ್ನೆ ಮಧ್ಯಾಹ್ನದ ನಂತರ ಸ್ವಲ್ಪಮಟ್ಟಿಗೆ ಇಳಿಮುಖಗೊಂಡಿದೆ. ಇಂದು ಬೆಳಿಗ್ಗೆ ಕೆಲವೊಡೆ ಸೂರ್ಯನ ಕಿರಣಗಳ ದರ್ಶನವಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮ ಭರ್ತಿಯಾಗಿದ್ದು, ರಸ್ತೆ ಭಾಗದಲ್ಲಿ ನಿಂತಿದ್ದ ನೀರು ತಗ್ಗಿದೆ.

 

ಮುಳುಗಡೆಯಾಗಿದ್ದ ಭಾಗಮಂಡಲ ಉದ್ಯಾನವನದಲ್ಲಿ ನೀರು ಕಡಿಮೆಯಾಗಿದೆ. ಕೆಲವು ಗಿಡಗಳು ಕೊಚ್ಚಿ ಹೋಗಿವೆ. ಬಲಮುರಿಯಲ್ಲಿ ನೀರಿನ ಹರಿವಿಕೆ ತಗ್ಗಿದ್ದರು ಹಳೆ ಸೇತುವೆ ಮುಳುಗಡೆಗೊಂಡಿದೆ. ಈ ಭಾಗದ ಜನರು ಮತ್ತೊಂದು ಸೇತುವೆ ಮೂಲಕ ಹೆಚ್ಚಿನ ದೂರಕ್ರಮಿಸಿ, ಬಲಮುರಿ ಅಗಸ್ತೇಶ್ವರ ದೇವಾಲಯ,, ವಿರಾಜಪೇಟೆ, ಮೂರ್ನಾಡುವಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಒಟ್ಟಿನಲ್ಲಿ ಜಿಲ್ಲಾಧ್ಯಂತ ವರುಣನ ಆರ್ಭಟಕ್ಕೆ ನಿನ್ನೆ ರಾತ್ರಿಯಿಂದಲೇ ಕೊಂಚ ಬ್ರೇಕ್ ಬಿದ್ದಿದೆ.

You may also like