Viral Video : ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳು ನಿಜಕ್ಕೂ ಅಸಹ್ಯವನ್ನು ಹುಟ್ಟಿಸುತ್ತದೆ. ಜನರು ಈ ಲೆವೆಲ್ ಗೂ ಕೂಡ ಇಳಿಯುತ್ತಾರಾ ಎಂಬುದಾಗಿ ನಮ್ಮನ್ನು ಚಿಂತೆಗೆ ಹೆಚ್ಚುತ್ತದೆ. ಅಂತೆಯೇ ಇದೀಗ ಮತ್ತೊಂದು ವಿಡಿಯೋವೈರಲ್ ಆಗಿದ್ದು ರಸ್ತೆ ಬದಿ ಮಲಗಿರುವ ವ್ಯಕ್ತಿಯ ಮೇಲೆ ಮಹಿಳೆ ಒಬ್ಬಳು ಮೂತ್ರ ಮಾಡಿರುವ ಘಟನೆ ನಡೆದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ರಸ್ತೆಬದಿಯಲ್ಲಿ ಮಲಗಿರುವ ಪುರುಷನ ಮೇಲೆ ಮಹಿಳೆಯೊಬ್ಬರು ನಿಂತು ಯಾವುದೇ ಹಿಂಜರಿಕೆಯಿಲ್ಲದೆ ಮೂತ್ರ ವಿಸರ್ಜನೆ ಮಾಡುವುದನ್ನು ಕಾಣಬಹುದು. ವೀಡಿಯೊದಲ್ಲಿ ಮಲಗಿರುವ ವ್ಯಕ್ತಿ ಪರಿಸ್ಥಿತಿಗೆ ಪ್ರತಿಕ್ರಿಯಿಸುತ್ತಿಲ್ಲ. ಅಥವಾ ಪ್ರಜ್ಞ ಹೀನನಾಗಿ ಬಿದ್ದಿದ್ದಾನೋ ಗೊತ್ತಿಲ್ಲ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು ಜನರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ನಾಚಿಕೆಗೇಡಿನ ಕೃತ್ಯ, ಅಮಾನವೀಯ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ವೈರಲ್ ಆದಾಗಿನಿಂದ, ಜನರಲ್ಲಿ ಕೋಪ ಮತ್ತು ಚರ್ಚೆಗೆ ನಾಂದಿ ಹಾಡಿದೆ. ಆದಾಗ್ಯೂ, ಘಟನೆಯ ನಿಖರವಾದ ಸ್ಥಳ ಮತ್ತು ಹಿನ್ನೆಲೆ ಇನ್ನೂ ಸ್ಪಷ್ಟವಾಗಿಲ್ಲ.
