4
Marriage: ಹಸೆಮಣೆ ಏರಬೇಕಿದ್ದ ಯುವತಿಯೊಬ್ಬಳು ರೋಲರ್ ಕೋಸ್ಟರ್ ಅವಘಡದಲ್ಲಿ ಪ್ರಾಣ ಕಳೆದುಕೊಂಡ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಪ್ರಿಯಾಂಕಾ (24) ಎಂದು ಗುರುತಿಸಲಾಗಿದೆ. ಈಕೆ ನೋಯ್ತಾದ ಖಾಸಗಿ ಟೆಲಿಕಾಂ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಪ್ರಿಯಾಂಕ ತನ್ನ ಭಾವಿ ಪತಿ ನಿಖಿಲ್ ಜೊತೆ ನೈಋತ್ಯ ದೆಹಲಿಯ ಕಪಶೇರಾ ಬಳಿಯ ವಾಟರ್ & ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಭೇಟಿ ನೀಡಿದ್ದರು. ಈ ವೇಳೆ ರೋಲರ್ ಕೋಸ್ಟರ್ ಆಡುವಾಗ ಸ್ವಿಂಗ್ ತರಹದ ರೈಡ್‌ನಲ್ಲಿ ಪ್ರಿಯಾಂಕಾ ಕುಳಿತಿದ್ದರು. ಆದರೆ ಅದರ ಸ್ಟಾಂಡ್ ಮುರಿದಿದ್ದು, ಈ ವೇಳೆ ಪ್ರಿಯಾಂಕಾ ಎತ್ತರದಿಂದ ಕೆಳಗೆ ಬಿದ್ದು, ಗಂಭೀರ ಗಾಯಗೊಂಡಿದ್ದ ಆಕೆ ಮೃತಪಟ್ಟಿದ್ದಾಳೆ.
