Home » Puttur: ಪುತ್ತೂರು: ತೋಡಿನಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣ: ಗಂಡನ ಅಣ್ಣ ನಾಪತ್ತೆ!!

Puttur: ಪುತ್ತೂರು: ತೋಡಿನಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣ: ಗಂಡನ ಅಣ್ಣ ನಾಪತ್ತೆ!!

0 comments

Puttur: ಪುತ್ತೂರು ತಾಲೂಕಿನ ಕೆದಿಲ ಗ್ರಾಮದ ಕಾಂತಕೋಡಿ ಎಂಬಲ್ಲಿ ಮಮತಾ (35) ಎಂಬ ಮಹಿಳೆಯ ಶವ ತೋಡಿನಲ್ಲಿ ಪತ್ತೆಯಾಗಿರುವ ಘಟನೆ ಕುರಿತಂತೆ ಇದೀಗ ಹೊಸ ಟ್ವಿಸ್ಟ್ ದೊರೆತಿದೆ.

ಮೃತ ಮಮತಾ ಅವರು ಮದ್ಯಾಹ್ನದ ವೇಳೆ ತೋಡಿಗೆ ಬಟ್ಟೆ ತೊಳಿಯಲು ಹೋಗಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಮಧ್ಯೆ ಮಮತಾರವರ ಗಂಡನ ಅಣ್ಣ ಈ ಘಟನೆಯ ನಂತರದಿಂದಲೇ ನಾಪತ್ತೆಯಾಗಿದ್ದು, ಅವರ ಮೊಬೈಲ್‌ ಫೋನ್ ಸ್ವಿಚ್ ಆಫ್‌ ಆಗಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ. ಇದರಿಂದಾಗಿ ಇದೀಗ ಅವರ ಮೇಲೂ ತನಿಖೆ ತೀವ್ರಗೊಳ್ಳುತ್ತಿದೆ.

ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎಲ್ಲ ಸಾಧ್ಯತೆಯ ಅಂಶಗಳ ಬಗ್ಗೆ ವಿಚಾರಣೆ ಆರಂಭಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: CM Siddaramaiah: ಧರ್ಮಸ್ಥಳದಲ್ಲಿ ಗಲಾಟೆ ಪ್ರಕರಣ : ತಪ್ಪಿತಸ್ಥರಿಗೆ ಶಿಕ್ಷೆ ಗ್ಯಾರಂಟಿ ಎಂದ ಸಿಎಂ ಸಿದ್ದರಾಮಯ್ಯ!

You may also like