2
Death: ಯುವಕನೋರ್ವ ವಿದ್ಯುತ್ ಪ್ರವಹಿಸಿ ದಾರುಣವಾಗಿ ಅಂತ್ಯ ಕಂಡಿರುವ ಘಟನೆ ಶುಕ್ರವಾರ ಸಂಜೆ ಮಡಿಕೇರಿ ತಾಲೂಕಿನ ಹುಲಿತಾಳ ಗ್ರಾಮದಲ್ಲಿ ನಡೆದಿದೆ.
ಮರಗೋಡು ಸಮೀಪವಿರುವ ಹುಲಿತಾಳ ಗ್ರಾಮದ ಪ್ರದೀಪ್ ಹೆಚ್.ಪಿ (32) ಎಂಬಾತ ವಿದ್ಯುತ್ ಕಂಬದಲ್ಲಿಯೇ ಸಾವನ್ನಪ್ಪಿದ್ದಾನೆ.
ವಿದ್ಯುತ್ ಕಂಬವನ್ನೇರಿ ದುರಸ್ತಿ ಮಾಡಲು ಯತ್ನಿಸಿದ್ದ ಎನ್ನಲಾಗಿದೆ. ಈ ಸಂದರ್ಭ ಕಂಬದಲ್ಲೇ ವಿದ್ಯುತ್ ಪ್ರವಹಿಸಿದೆ. ಮೃತನ ದೇಹವನ್ನು ಜಿಲ್ಲಾಸ್ಪತ್ರೆ ಮಡಿಕೇರಿಗೆ ರವಾನಿಸಲಾಗಿದೆ.
