Home » Kadaba: ಕಡಬ: ಖಿನ್ನತೆಯಿಂದ ಬಳಲುತ್ತಿದ್ದ ಯುವಕ ನೇಣಿಗೆ ಶರಣು: ತಾಯಿಯನ್ನು ಕಾಲೇಜಿಗೆ ಬಿಟ್ಟು ಬಂದು ಆತ್ಮಹತ್ಯೆ

Kadaba: ಕಡಬ: ಖಿನ್ನತೆಯಿಂದ ಬಳಲುತ್ತಿದ್ದ ಯುವಕ ನೇಣಿಗೆ ಶರಣು: ತಾಯಿಯನ್ನು ಕಾಲೇಜಿಗೆ ಬಿಟ್ಟು ಬಂದು ಆತ್ಮಹತ್ಯೆ

0 comments

Kadaba: ದ.ಕ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕೊಡಂಕೇರಿ ಆಕೋಟತ್ತಡ್ಕದಲ್ಲಿ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತನನ್ನು ದಿ. ವಾಲ್ಟರ್ ರೋಡ್ರಿಗಸ್ ಅವರ ಪುತ್ರ ಚೇತನ್ ಎಂದು ಗುರುತಿಸಲಾಗಿದೆ. ಚೇತನ್ ತನ್ನ ಮನೆಯ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪದವಿ ಶಿಕ್ಷಣ ಮುಗಿಸಿದ್ದ ಚೇತನ್, ಮನೆಯಲ್ಲಿ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದನು. ಆದರೆ, ಕಳೆದ ಕೆಲ ಸಮಯದಿಂದ ಆತ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು ಮತ್ತು ಇದಕ್ಕಾಗಿ ಪುತ್ತೂರಿನ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದನು ಎಂದು ತಿಳಿದುಬಂದಿದೆ.ಮಧ್ಯಾಹ್ನದ ವೇಳೆಗೆ ಕಾಲೇಜಿನಿಂದ ತಾಯಿ ಮೊಬೈಲ್ ಕರೆ ಮಾಡಿದಾಗ ಚೇತನ್ ಕರೆ ಸ್ವೀಕರಿಸಿಲ್ಲ.

ಇದರಿಂದ ಅನುಮಾನಗೊಂಡ ತಾಯಿ ಮನೆಯ ಮೇಲೆ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಕರೆ ಮಾಡಿ ವಿಚಾರಿಸುವಂತೆ ಹೇಳಿದ್ದರು. ಕೆಲಸಗಾರ ಕೋಣೆಯ ಬಳಿ ಬಂದಾಗ ಬಾಗಿಲು ಚಿಲಕ ಹಾಕಿರುವುದು ಕಂಡುಬಂದಿದ್ದು, ಕಿಟಕಿಯ ಸಂದಿಯಿಂದ ನೋಡಿದಾಗ ಚೇತನ್ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದು ದೃಢಪಟ್ಟಿದೆ.ಈ ಘಟನೆ ಸಂಬಂಧ ಚೇತನ್ ಅವರ ತಾಯಿ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like