Home » Bengaluru: ರಸ್ತೆಯಲ್ಲೇ ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ: ಪ್ರಾಣ ಉಳಿಸಿಕೊಳ್ಳಲು ಬೆತ್ತಲಾಗಿಯೇ ಓಡಿದ ಯುವಕ

Bengaluru: ರಸ್ತೆಯಲ್ಲೇ ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ: ಪ್ರಾಣ ಉಳಿಸಿಕೊಳ್ಳಲು ಬೆತ್ತಲಾಗಿಯೇ ಓಡಿದ ಯುವಕ

2 comments

Bengaluru: ಬೆಂಗಳೂರು ನಗರದಲ್ಲಿ ಅಮಾನವೀಯ ಕೃತ್ಯ ಒಂದು ನಡೆದಿದೆ. ನಡು ರಸ್ತೆಯಲ್ಲೇ ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದು, ಪ್ರಾಣ ಉಳಿಸಿಕೊಳ್ಳಲು ಬೆತ್ತಲಾಗಿಯೇ ಯುವಕ ಓಡಿದ್ದಾನೆ.

ಹೌದು, ಬೆಂಗಳೂರಲ್ಲಿ ಪುಡಿರೌಡಿಗಳ ಅಟ್ಟಹಾಸ ಮಿತಿ ಮೀರಿದೆ. ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ಓಡಾಡುವುದಕ್ಕೂ ಭಯ ಪಡುವ ವಾತಾವರಣ ಸೃಷ್ಟಿಯಾಗಿದೆ. ಇದೀಗ ಯುವಕನ ಬಟ್ಟೆ ಬಿಚ್ಚಿಸಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ (Bengaluru) ನಡೆದಿದ್ದು ಜನರಲ್ಲಿ ಭಯ ಹುಟ್ಟಿಸಿದೆ.

ರೌಡಿಶೀಟರ್‌ (Rowdy Sheeter) ಪವನ್‌ ಅಲಿಯಾಸ್‌ ಕಡುಬು ಎಂಬಾತ ಕಳೆದ ಕೆಲ ದಿನಗಳ ಹಿಂದೆ ಯುವಕನ ಬಟ್ಟೆ ಬಿಚ್ಚಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕೈಯಲ್ಲಿ ಮಾರಕಾಸ್ತ್ರ ಹಿಡಿದು ಮುಖದಲ್ಲಿ ರಕ್ತ ಬರುವಂತೆ ಹೊಡೆದು, ಆವಾಜ್‌ ಹಾಕಿ ಬಟ್ಟೆ ಬಿಚ್ಚಿಸಿದ್ದಾನೆ. ಈ ವೀಡಿಯೋ ‌ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಕಾಮಾಕ್ಷಿಪಾಳ್ಯ ಠಾಣಾ (kamakshipalya Police Station) ವ್ಯಾಪ್ತಿಯ ಸುಂಕದಕಟ್ಟೆ ಬಳಿ ಕೃತ್ಯ ನಡೆದಿದ್ದು, ಪವನ ಅಲಿಯಾಸ್‌ ಕಡುಬು ರಾಜಗೋಪಲನಗರ ರೌಡಿ ಶೀಟರ್ ಎಂದು ಮೂಲಗಳಿಂದ ತಿಳಿದುಬಂದಿದೆ.

You may also like

Leave a Comment