Home » Marriage request to MLA: ಮದುವೆ ಬೇಡಿಕೆ ಇಟ್ಟು ಶಾಸಕರ ಬೆನ್ನು ಬಿಡದ ಯುವಕ! ಶಾಸಕರು ಹೇಳಿದ್ದೇನು? ಕೇಳಿದ್ದೇನು?

Marriage request to MLA: ಮದುವೆ ಬೇಡಿಕೆ ಇಟ್ಟು ಶಾಸಕರ ಬೆನ್ನು ಬಿಡದ ಯುವಕ! ಶಾಸಕರು ಹೇಳಿದ್ದೇನು? ಕೇಳಿದ್ದೇನು?

0 comments
Marriage

Marriage request to MLA: ಉತ್ತರ ಪ್ರದೇಶದ ಮಹೋಬಾದ ಯುವಕನೋರ್ವ ನಾನು ನಿಮಗೆ ವೋಟು ಹಾಕಿದ್ದೇನೆ. ಹೀಗಾಗಿ ನೀವು ನನಗೆ ಮದುವೆ ಮಾಡಿಸಬೇಕು ಎಂದು ಅಲ್ಲಿನ ಬ್ರಿಜ್ ಭೂಷಣ್ ರಾಜಪೂತ್ ಶಾಸಕರ ಬಳಿ ಕೇಳಿದ್ದಾನೆ. ಈತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಉತ್ತರ ಪ್ರದೇಶದ ಚರಖಾರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬ್ರಿಜ್ ಭೂಷಣ್ ರಜಪೂತ್ ಅವರು ತಮ್ಮ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳುವುದಕ್ಕಾಗಿ ಮಹೋಬಾದ ಪೆಟ್ರೋಲ್ ಬಂಕ್‌ಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.

ಪೆಟ್ರೋಲ್ ಬಂಕ್‌ಗೆ ಬಂದ ಶಾಸಕರನ್ನು ನೋಡಿದ ಅಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಶಾಸಕರ ಬಳಿ ಈ ವಿಚಿತ್ರ ಮನವಿ (Marriage request to MLA) ಮಾಡಿದ್ದು, ಶಾಸಕರೇ ನಾನು ನಿಮಗೆ ಮತ ಹಾಕಿದ್ದೇನೆ, ಅದಕ್ಕೆ ಪ್ರತಿಯಾಗಿ ಈಗ ನೀವು ನನಗೆ ಮದುವೆ ಮಾಡಿಸಬೇಕು ಎಂದು ಯುವಕ ಶಾಸಕ ರಜಪೂತ್ ಬಳಿ ಕೇಳಿಕೊಂಡಿದ್ದಾನೆ.

ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಈ ವಿಚಿತ್ರ ಬೇಡಿಕೆಯಿಂದ ಆತನಿಗೆ ಹುಡುಗ ಹುಡುಕಿ ಮದುವೆ ಮಾಡಿಸುವ ಭರವಸೆ ನೀಡಿದ್ದಾರೆ. ನಂತರ ಯುವಕನ ಸಂಬಳದ ಬಗ್ಗೆ ಶಾಸಕರು ಕೇಳಿದ್ದಾರೆ. ಈ ವೇಳೆ ತನಗೆ ತಿಂಗಳಿಗೆ 5 ಸಾವಿರ ಸಂಬಳ ಬರುತ್ತಿದ್ದು, ಮನೆ ಕಡೆ ಸ್ವಲ್ಪ ಕೃಷಿ ಭೂಮಿ ಇದೆ ಎಂದು ಹೇಳಿದ್ದಾನೆ. ಈ ವೇಳೆ ಮಾತನಾಡಿದ ಶಾಸಕರು, ನಿಮಗೆ ಶೀಘ್ರವೇ ಮದುವೆಯಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನೀವು ನನಗೆ ಮತ ಹಾಕಿರುವುದರಿಂದ ಹುಡುಗಿ ಹುಡುಕಿ ಮದುವೆ ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.

You may also like

Leave a Comment