Home » Suside: ಪಹಲ್ಗಾಮ್‌ ದಾಳಿಯ ಉಗ್ರರಿಗೆ ಸಹಾಯ ಮಾಡಿದ ಯುವಕ ನದಿಗೆ ಹಾರಿ ಆತ್ಮಹತ್ಯೆ!!

Suside: ಪಹಲ್ಗಾಮ್‌ ದಾಳಿಯ ಉಗ್ರರಿಗೆ ಸಹಾಯ ಮಾಡಿದ ಯುವಕ ನದಿಗೆ ಹಾರಿ ಆತ್ಮಹತ್ಯೆ!!

0 comments

Suside : ಪಹಲ್ಗಾಮ್‌ ದಾಳಿಯ ಉಗ್ರರಿಗೆ ಸಹಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದ್ದ ಯುವಕನೊಬ್ಬ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಯುವಕನೊಬ್ಬ ಉಗ್ರರಿಗೆ ಆಹಾರ ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವಾಗ ಸಿಕ್ಕಿಬಿದ್ದಿದ್ದು, ಸೇನೆ ಬೆನ್ನಟ್ಟುತ್ತಿದ್ದಂತೆಯೇ ಆತ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಯುವಕನನ್ನು ಇಮ್ತಿಯಾಜ್‌ ಅಮಹ್ಮದ್‌ ಮಾಗರೇ ಎಂದು ಗುರುತಿಸಲಾಗಿದೆ. 22 ವರ್ಷದ ಈತ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ಪ್ರಾಣಬಿಟ್ಟಿದ್ದಾನೆ. ಸ್ಥಳೀಯ ಯುವಕನಾದ ಇಮ್ತಿಯಾಜ್‌ ಉಗ್ರರ ಪತ್ತೆಯಲ್ಲಿ ಸೇನೆಗೆ ನೆರವಾಗುವುದಾಗಿ ಹೇಳಿದ್ದ. ಸೈನಿಕರ ಪರವಾಗಿ ಭೂಗತವಾಗಿ ಕಾರ್ಯವೆಸಗುವ ಸೋಗು ಧರಿಸಿ ಗುಪ್ತವಾಗಿ ಭಯೋತ್ಪಾದಕರಿಗೆ ನೆರವಾಗುತ್ತಿದ್ದ. ಈತನ ಸುಳಿವು ಹಿಡಿದು ಸೇನೆ ಬೆನ್ನು ಹತ್ತಿತ್ತು.

You may also like