Home » ಹಿಂದೂ ಯುವತಿಯ ಮನೆಗೆ ನುಗ್ಗಿದ ಮುಸ್ಲಿಂ ಯುವಕ | ನಂತರ ನಡೆಯಿತು ಭಯಾನಕ ಘಟನೆ!!!

ಹಿಂದೂ ಯುವತಿಯ ಮನೆಗೆ ನುಗ್ಗಿದ ಮುಸ್ಲಿಂ ಯುವಕ | ನಂತರ ನಡೆಯಿತು ಭಯಾನಕ ಘಟನೆ!!!

0 comments

ಸಹಾರನಪುರದ(ಉತ್ತರ ಪ್ರದೇಶ) ಇಸ್ಲಾಂನಗರದಲ್ಲಿ ರಾತ್ರಿಯ ಸಮಯದಲ್ಲಿ ಹಿಂದೂ ಯುವತಿಯ ಮನೆಗೆ ಮುಸ್ಲಿಂ ಯುವಕನೊಬ್ಬ ನುಗ್ಗಿದ್ದಾನೆ. ಇದನ್ನು ತಿಳಿದ ಆಕೆಯ ಮನೆಯವರು ಯುವಕನಿಗೆ ಚೆನ್ನಾಗಿ ಹೊಡೆದಿದ್ದಾರೆ. ವಿಪರೀತ ಹೊಡೆತ ತಿಂದ ಕಾರಣ ಯುವಕ ಸಾವನ್ನಪ್ಪಿರುವುದು ತಿಳಿದುಬಂದಿದೆ.

ಜಿಯಾಉರ್‌ರೆಹಮಾನ್ ಎಂಬ ಮುಸ್ಲಿಂ ಯುವಕನು ರಾತ್ರಿಯ ಸಮಯದಲ್ಲಿ ಹಿಂದೂ ಯುವತಿಯ ಮನೆಗೆ ನುಗ್ಗಿದ್ದಾನೆ. ಹಾಗಾಗಿ ಮನೆಯವರು ಅವನನ್ನು ಚೆನ್ನಾಗಿ ಥಳಿಸಿದ್ದಾರೆ. ಇದರಿಂದ ಅಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಯಾಕೆಂದರೆ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕ ಇವರಿಬ್ಬರು ಪ್ರೀತಿಸುತ್ತಿದ್ದರು. ಹಾಗಾಗಿ ಆತ ಮನೆಗೆ ನುಗ್ಗಿದ್ದಾನೆ. ಯುವಕನಿಗೆ ಚೆನ್ನಾಗಿ ಥಳಿಸಿ, ಗಾಯಗೊಂಡ ನಂತರ ಪೊಲೀಸರಿಗೆ ಕರೆ ಮಾಡಲಾಯಿತು.

ಪೊಲೀಸರು ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಈ ಘಟನೆ ನಡೆದ ನಂತರ, ಯುವಕನ ಸಾವಿನ ವಿಷಯ‌ ತಿಳಿದ ಆತನ ಪ್ರಿಯತಮೆ ಆಗಿದ್ದ ಹಿಂದೂ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೂ ಇವರಿಬ್ಬರು ಒಂದೇ ತರಗತಿಯಲ್ಲಿ ಓದುತ್ತಿದ್ದರು ಎನ್ನಲಾಗಿದೆ.

ಇನ್ನೂ ಎರಡೂ ಕಡೆಯಿಂದ ಯಾವುದೇ ದೂರು ದಾಖಲಾಗಿಲ್ಲ. ದೂರು ನೀಡಿದರೆ ಅಪರಾಧವನ್ನು ದಾಖಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಪೋಲಿಸರು ತಿಳಿಸಿದ್ದಾರೆ.

You may also like

Leave a Comment