Home » Whatsapp ಸ್ಟೇಟಸ್‌ಗೆ ಪ್ರೇಯಸಿಯ ಫೋಟೋ; ಪ್ರಾಣ ಬಿಟ್ಟ ಯುವತಿ

Whatsapp ಸ್ಟೇಟಸ್‌ಗೆ ಪ್ರೇಯಸಿಯ ಫೋಟೋ; ಪ್ರಾಣ ಬಿಟ್ಟ ಯುವತಿ

0 comments

Chikkodi: ಕಾಮಾಲೆ ಕಣ್ಣಿಗೆ ಎಲ್ಲನೂ ಹಳದಿಯಾಗೇ ಕಾಣುತ್ತದೆಯಂತೆ. ಹಾಗೆಯೇ ಪ್ರೀತಿ ಉಕ್ಕಿ ಹರಿದರೆ ಏನು ಅನಾಹುತ ಆಗುತ್ತೇ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. whatsapp ಸ್ಟೇಟಸ್‌ಗೆ ಪ್ರೇಯಸಿಯ ಫೋಟೋವನ್ನು ಹಾಕಿದ ಪ್ರಿಯಕರ. ಇದನ್ನು ಕಂಡ ಪ್ರಿಯತಮೆ ತನ್ನ ಪ್ರಾಣವನ್ನೇ ಬಿಟ್ಟಿದ್ದಾಳೆ.

ಹೀಗೆ ಪ್ರಾಣ ಬಿಟ್ಟ ಯುವತಿಯ ಹೆಸರು ಆರತಿ ಪ್ರಶಾಂತ ಕಾಂಬಳೆ. ಈಕೆಗೆ ಇನ್ನೂ 26 ರ ಹರೆಯ. ಮದುವೆನೂ ಆಗಿದೆ. ಆದರೆ ಇನ್ನೋರ್ವನ ಮೋಹಕ್ಕೆ ಬಿದ್ದು, ಆತನ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು. ಈಕೆಯ ಜೊತೆ ಸ್ನೇಹ ಬೆಳೆಸಿದ ಹುಡುಗ ಸಾಗರ ಕಾಂಬಳೆ. ಈತ ತನ್ನ ಪ್ರೇಯಸಿಯ ಮೋಹದಲ್ಲಿ ಹುಚ್ಚು ಪ್ರೀತಿಯಲ್ಲಿ ಬಿದ್ದು, ಸ್ಟೇಟಸಲ್ಲಿ ಈಕೆಯ ಫೋಟೋ ಹಾಕಿದ್ದ. ಇದು ವೈರಲ್‌ ಆಗಿತ್ತು.

ಅಕ್ರಮ ಸಂಬಂಧ ಬಯಲಾದ ಕಾರಣ ಮನನೊಂದು ಆರತಿ ಪ್ರಾಣವೇ ಕಳೆದುಕೊಂಡಿದ್ದಾರೆ.

ಈ ಘಟನೆ ನಡೆದಿರುವುದು ಬೆಳಗಾವಿಯಲ್ಲಿ. ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ್‌ ಗ್ರಾಮದಲ್ಲಿ ಆರತಿ ಮದುವೆಯಾಗಿ ಸುಖಸಂಸಾರ ಮಾಡುತ್ತಿದ್ದರು. ವಾಟ್ಸಪ್‌ ಸ್ಟೇಟಸ್‌ ಫೋಟೋ ವೈರಲ್‌ ಆದ ಕಾರಣ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದ ಸಂಬಂಧಿಕರ ಮನೆಗೆ ಬಂದು ಸಾವಿಗೀಡಾಗಿದ್ದಾಳೆ.

ರಾಯಬಾಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

You may also like

Leave a Comment