Home » Viral Video: ಗಿಡದ ಜೊತೆ ರೊಮ್ಯಾನ್ಸ್‌ ಮಾಡುವ ಯುವತಿ; ಊಟ, ನಿದ್ದೆ, ಪ್ರೀತಿ ಎಲ್ಲ ಮರದ ಜೊತೆ!

Viral Video: ಗಿಡದ ಜೊತೆ ರೊಮ್ಯಾನ್ಸ್‌ ಮಾಡುವ ಯುವತಿ; ಊಟ, ನಿದ್ದೆ, ಪ್ರೀತಿ ಎಲ್ಲ ಮರದ ಜೊತೆ!

0 comments

Viral Video: ಸಾಮಾಜಿಕ ಜಾಲತಾಣದಲ್ಲಿ ಯುವತಿಯೋರ್ವಳು ಮರದ ಜೊತೆಗೆ ಡೇಟ್‌ ಮಾಡುವುದು, ಪ್ರೀತಿಯಿಂದ ಮಾತಾಡುವುದು ಕಂಡು ಬರುವ ವೀಡಿಯೋವೊಂದು ಭಾರೀ ವೈರಲ್‌ ಆಗುತ್ತಿದೆ. ಈ ವೀಡಿಯೋ ಪ್ರಕಾರ ಅವಳು ಹೇಳಿರುವ ರೀತಿಯಲ್ಲಿ ಅವಳು ಕಳೆದ ಎರಡು ವಾರಗಳಿಂದ ಈ ಮರದ ಜೊತೆ ಡೇಟಿಂಗ್‌ ಮಾಡುತ್ತಿದ್ದು, ಕುಳಿತರೂ ನಿಂತೂ ಮರ ಬೇಕೇ ಬೇಕು ಎನ್ನುವಷ್ಟರ ಮಟ್ಟಿಗೆ ಅಟ್ಯಾಚ್‌ಮೆಂಟ್‌ ಆಗಿದೆ ಎಂದಿದ್ದಾಳೆ. ಪ್ರತಿ ಸೆಕೆಂಡ್‌ ಕೂಡ ಈಕೆ ಮರ ಬಿಟ್ಟ ಆಚೆ ಈಚೆ ಹೋಗುವುದಿಲ್ಲ.

ಈಕೆ ಎಐ ವ್ಯವಸ್ಥೆಯನ್ನು ಕೂಡಾ ಮಾಡಿದ್ದು, ರಾತ್ರಿ ಮಲಗುವ ಸಮಯದಲ್ಲಿಯೂ ಮರ ಪಕ್ಕದಲ್ಲಿಯೇ ಇರುತ್ತದೆ. ಸಮುದ್ರ ತೀರದಲ್ಲಿ ಹೋದಾಗ ಆಕೆ ಮರದೊಂದಿಗೆ ರೊಮ್ಯಾನ್ಸ್‌ ಕೂಡಾ ಮಾಡಿದ್ದಾಳೆ ಎನ್ನುವುದು ಆಕೆನೇ ಹೇಳಿದ್ದಾಳೆ.

ಇದನ್ನೆಲ್ಲ ನನಗೆ ಸಾರ್ವಜನಿಕರ ಜೊತೆ ಹೇಳಿಕೊಳ್ಳಲು ಸ್ವಲ್ಪ ನಾಚಿಕೆ. ಹಾಗಾಗಿ ನಾನು ನನ್ನ ಥೆರಪಿಸ್ಟ್‌ ಜೊತೆ ಹೇಳುವೆ. ಅವರ ಸಲಹೆ ಕೇಳುವೆ. ಅವರು ಹೇಳಿದ ರೀತಿಯೇ ನಡೆಯುತ್ತಿದ್ದೇನೆ. ಹೀಗಾಗಿ ನನಗೆ ಈ ಗಿಡ, ಮರದ ಜೊತೆ ಒಂದು ಪ್ರಚಲಿತವಲ್ಲದ ಸಂಬಂಧವಿದೆ ಎಂದು ಹೇಳಿದ್ದಾಳೆ.

You may also like

Leave a Comment