Home » Amitabh Bachchan: “ನನ್ನ ಆಸ್ತಿಯ ಏಕೈಕ ವಾರಸುದಾರ ಅಭಿಷೇಕ್ ಅಲ್ಲ” ಎಂದ ಅಮಿತಾಭ್ ಬಚ್ಚನ್! ಶತಕೋಟಿ ಆಸ್ತಿ ಯಾರ ಪಾಲು?

Amitabh Bachchan: “ನನ್ನ ಆಸ್ತಿಯ ಏಕೈಕ ವಾರಸುದಾರ ಅಭಿಷೇಕ್ ಅಲ್ಲ” ಎಂದ ಅಮಿತಾಭ್ ಬಚ್ಚನ್! ಶತಕೋಟಿ ಆಸ್ತಿ ಯಾರ ಪಾಲು?

304 comments
Amitabh Bachchan

Amitabh Bachchan Property: ಬಾಲಿವುಡ್ ಹಿರಿಯ ನಟ, ಬಿ ಟೌನ್ ನಲ್ಲಿ ಬಿಗ್ ಬಿ ಎಂದೇ ಖ್ಯಾತಿಗಳಿಸಿರುವ ಅಮಿತಾಬ್ ಬಚ್ಚನ್ ಆಸ್ತಿ (Amitabh Bachchan Property) ಬಹಳ ದೊಡ್ಡ ಮೊತ್ತದಿಂದ ಕೂಡಿದೆ. ಹೌದು, ಕೆಲವು ವರದಿ ಪ್ರಕಾರ ಅಮಿತಾಬ್ ಬಚ್ಚನ್ 3,190 ಕೋಟಿ ರೂಪಾಯಿ ಆಸ್ತಿ, ಜೊತೆಗೆ ಐಷಾರಾಮಿ ಬಂಗಲೆ ಜಲ್ಸಾ ಬರೋಬ್ಬರಿ 112 ಕೋಟಿ ರೂ. ಮೌಲ್ಯದ್ದಾಗಿದ್ದು, ಇದಲ್ಲದೇ ಅವರ ಹೆಸರಿನಲ್ಲಿ ಜನಕ್, ವತ್ಸ ಮುಂತಾದ ಬಂಗಲೆಗಳೂ ಇವೆ.

ಇನ್ನು ಬೆಂಟ್ಲಿ ಕಾಂಟಿನೆಂಟಲ್ GT, ರೇಂಜ್ ರೋವರ್ ಆಟೋಬಯೋಗ್ರಫಿ, ರೋಲ್ಸ್ ರಾಯ್ಸ್ ಫ್ಯಾಂಟಮ್, ಲೆಕ್ಸಸ್ LX570 ಮತ್ತು Audi A8L ನಂತಹ ಐಷಾರಾಮಿ ವಾಹನಗಳ ಹೊರತಾಗಿ, ಬಿಗ್ ಬಿ ಸುಮಾರು 260 ಕೋಟಿ ರೂಪಾಯಿ ಮೌಲ್ಯದ ಖಾಸಗಿ ಜೆಟ್ ಅನ್ನು ಸಹ ಹೊಂದಿದ್ದಾರೆ.

ಒಟ್ಟಿನಲ್ಲಿ ಬಾಲಿವುಡ್‌ ಶಾಹೆನ್‌ ಶಾ ಅಮಿತಾಬ್ ಬಚ್ಚನ್ ಶತಕೋಟಿ ಆಸ್ತಿಯ ಕಿಂಗ್ ಆಗಿದ್ದಾರೆ. ಅಂತೆಯೇ ಇತ್ತೀಚಿಗೆ ಮಗಳು ಶ್ವೇತಾಗೆ ತಮ್ಮ ಜುಹು ಪ್ರತೀಕ್ಷಾ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದರು. 1564 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಬಂಗಲೆಯ ಬೆಲೆ ಬರೋಬ್ಬರಿ 50 ಕೋಟಿ ಆಗಿದೆ. ಆದ್ರೆ ಅದಾದ ನಂತರ ಅಮಿತಾಬ್ ಬಳಿ ಉಳಿದಿರುವ ಎಲ್ಲಾ ಆಸ್ತಿಗೆ ಅಭಿಷೇಕ್ ಬಚ್ಚನ್‌ʼಗೆ ವಾರಸುದಾರರಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ತನ್ನ ಆಸ್ತಿಯ ಏಕೈಕ ವಾರಸುದಾರ ಅಭಿಷೇಕ್‌ ಆಗಲ್ಲ ಎಂದು ಸ್ವತಃ ಅಮಿತಾಬ್ ಬಚ್ಚನ್ ಹೇಳಿದ್ದಾರೆ.

ಹೌದು, ತಮ್ಮ ರಿಯಾಲಿಟಿ ಶೋ ಕೆಬಿಸಿಯಲ್ಲಿ ಅಮಿತಾಬ್ ಬಚ್ಚನ್ ಆಸ್ತಿ ಬಗ್ಗೆ ಮಾತನಾಡಿದ್ದು, ಅಭಿಷೇಕ್ ಬಚ್ಚನ್ ನನ್ನ ನಂತರ ನನ್ನ ಸಂಪೂರ್ಣ ಆಸ್ತಿಯನ್ನು ಪಡೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. “ಸಹಜವಾಗಿ ನಾವು ಇಲ್ಲವಾದಾಗ, ನಮ್ಮಲ್ಲಿ ಏನಿದೆಯೋ ಅದು ನಮ್ಮ ಮಕ್ಕಳಿಗೆ ಸೇರುತ್ತದೆ. ಅಂತೆಯೇ ನನಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಹೀಗಾಗಿ ಇವರಿಬ್ಬರಿಗೆ ನನ್ನ ಆಸ್ತಿ ಸಮನಾಗಿ ಹಂಚಲಾಗುವುದು” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ಅಮಿತಾಬ್ ಬಚ್ಚನ್ ಅವರ ಎಲ್ಲಾ ಆಸ್ತಿಗಳ ಮೇಲೆ ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ ಎಂಬುದು ಸ್ಪಷ್ಟವಾಗಿದೆ.

You may also like

Leave a Comment