6
Bengaluru: ಬೆಂಗಳೂರು ಇತ್ತೀಚಿಗೆ ಬಹಳ ಆಕ್ಸಿಡೆಂಟ್ ಗಳು ನಡೆಯುತ್ತಿದ್ದು ಇದೀಗ, ನೆಲಮಂಗಲದ ಕುಣಿಗಲ್ ಬೈ ಪಾಸ್ ನಲ್ಲಿ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಆಗಿದ್ದು, ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.
ವೇಗವಾಗಿ ಬಂದಂತಹ ಲಾರಿ ಬೈಗೆ ಡಿಕ್ಕಿ ಹೊಡೆದ ಕಾರಣ ಬೈಕ್ ನಲ್ಲಿ ಇದ್ದಂತಹ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು, ಮೃತ ದುರ್ದೈವಿಗಳನ್ನು ಬೆಂಗಳೂರು ಶ್ರೀರಾಮಪುರದ ನಿವಾಸಿ ಪ್ರಜ್ವಲ್ (22) ಸಹನಾ (21) ಎಂದು ಗುರುತಿಸಲಾಗಿದೆ.
ಇನ್ನು ಈ ಪ್ರಕರಣ ನೆಲಮಂಗಲದ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮೃತ ದೇಹಗಳನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
