Home » Putturu: ಕೆಎಸ್‌ಆರ್‌ಟಿಸಿ ಬಸ್ಸು-ಬೈಕ್‌ ನಡುವೆ ಭೀಕರ ಅಪಘಾತ; ಓರ್ವ ಸಾವು

Putturu: ಕೆಎಸ್‌ಆರ್‌ಟಿಸಿ ಬಸ್ಸು-ಬೈಕ್‌ ನಡುವೆ ಭೀಕರ ಅಪಘಾತ; ಓರ್ವ ಸಾವು

by ಹೊಸಕನ್ನಡ
0 comments
Accident

Putturu: ಪುತ್ತೂರು-ಮಂಗಳೂರು ಹೆದ್ದಾರಿಯ ಕಬಕ ಕುವೆತ್ತಿಲ ಸಮೀಪದಲ್ಲಿ ಇಂದು (ಮೇ 11) ಸರಕಾರಿ ಬಸ್‌ ಹಾಗೂ ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ನಡೆದಿದೆ. ಈ ಘಟನೆಯಲ್ಲಿ ಓರ್ವ ಸಾವಿಗೀಡಾಗಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಕುರಿತು ವರದಿಯಾಗಿದೆ.

ಪುತ್ತೂರಿನಿಂದ ಮಂಗಳೂರಿನ ಕಡೆಗೆ ಹೋಗುತ್ತಿದ್ದ ಬಸ್‌, ಮಾಣಿ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ವೇಳೆ ಬೈಕ್‌ನಲ್ಲಿದ್ದ ಸವಾರರು ಗಂಭೀರ ಗಾಯಗೊಂಡಿದ್ದಾರೆ, ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಓರ್ವ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೈಕ್‌ ಸವಾರರಿಬ್ಬರು ಬಂಟ್ವಾಳ ತಾಲೂಕಿನ ನರಿಕೊಂಬಿನವರು ಎಂದು ವರದಿಯಾಗಿದೆ.

You may also like