Home » ಪ್ರಯಾಣದ ಮಧ್ಯೆ ಯುವಕರಿಬ್ಬರ ಚಾಲಕನೊಂದಿಗೆ ವಾಗ್ವಾದ| ಭೀಕರ ಅಪಘಾತ ಮಾಡುವುದರ ಮೂಲಕ ಯುವಕರ ಹತ್ಯೆ ಮಾಡಿದ KSRTC ಚಾಲಕ!!!

ಪ್ರಯಾಣದ ಮಧ್ಯೆ ಯುವಕರಿಬ್ಬರ ಚಾಲಕನೊಂದಿಗೆ ವಾಗ್ವಾದ| ಭೀಕರ ಅಪಘಾತ ಮಾಡುವುದರ ಮೂಲಕ ಯುವಕರ ಹತ್ಯೆ ಮಾಡಿದ KSRTC ಚಾಲಕ!!!

0 comments

ಪಾಲಕ್ಕಾಡ್ : ಇಲ್ಲೊಬ್ಬ ಕೆಎಸ್ ಆರ್ ಟಿಸಿ ಬಸ್ ಚಾಲಕನ ವಿರುದ್ಧ ಇಬ್ಬರು ಯುವಕರ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಅಪಘಾತ ಮಾಡುವ ಮೂಲಜ ಬಸ್ ಚಾಲಕ ಸೇಡು ತೀರಿಸಿಕೊಂಡಿದ್ದಾನೆ ಎಂಬ ಆರೋಪದ ಬೆನ್ನಲ್ಲೇ ಈ ಬಸ್ ಚಾಲಕನ ಕರಾಳ ಮುಖ ತನಿಖೆಯಿಂದ ಬಯಲಾಗಿದೆ.

ಈ ಅಪಘಾತಕ್ಕೂ ಮುನ್ನ ಬಸ್ ಚಾಲಕ ಹಾಗೂ ಯುವಕರ ನಡುವೆ ವಾಗ್ವಾದ ನಡೆದಿರುವ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ. ಈ ಅಪಘಾತ ಪೂರ್ವಯೋಜಿತ ಎಂದು ಅಪಘಾತದಿಂದ ಮೃತಪಟ್ಟ ಸಬಿತ್ ಅವರ ಸಹೋದರ ಶರತ್ ಆರೋಪ ಮಾಡಿದ್ದಾರೆ.

ಬಸ್ ನಲ್ಲಿದ್ದ ಇತರ ಪ್ರಯಾಣಿಕರು ಮತ್ತು ಇತರರು ಕೂಡಾ ಯುವಕರ ಮತ್ತು ಕೆಎಸ್ ಆರ್ ಟಿಸಿ ಚಾಲಕನ ನಡುವೆ ವಾಗ್ವಾದ ನಡೆದಿರುವುದನ್ನು ತಿಳಿಸಿದ್ದಾರೆ.

ಅಪಘಾತದ ದೃಶ್ಯಗಳು ಸಮೀಪದಲ್ಲೇ ಇದ್ದ ಕಾರಿನ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಭೀಕರ ಅಪಘಾತದಲ್ಲಿ ಪಾಲಕ್ಕಾಡ್ ಮೂಲದ ಆದರ್ಶ್ ಮೋಹನ್ ಮತ್ತು ಕಾಸರಗೋಡಿನ ಸಬಿತ್ ಸಾವನ್ನಪ್ಪಿದ್ದಾರೆ.

ಈ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ಲಾರಿ ಡ್ರೈವರ್ ನ ಮೇಲೆ ಪ್ರಕರಣ ದಾಖಲಾಗಿತ್ತು. ಆದರೆ ಅಪಘಾತದ ದೃಶ್ಯಾವಳಿಗಳು ಹೊರಬೀಳುತ್ತಿದ್ದಂತೆಯೇ ಬಸ್ ಉದ್ದೇಶಪೂರ್ವಕವಾಗಿ ಸಿಗ್ನಲ್ ನೀಡದೇ ದಿಢೀರನೆ ಬಲಕ್ಕೆ ತಿರುವು ಪಡೆದ ಪರಿಣಾಮ ಬೈಕ್ ಲಾರಿಗೆ ಡಿಕ್ಕಿ ಹೊಡೆದಿರುವುದು ಗೊತ್ತಾಗಿದೆ.

ತ್ರಿಶೂರ್ ಮೂಲದ ಬಸ್ ಚಾಲಕ ಸಿ ಎಲ್ ಔಸೆಫ್ ಎಂಬಾತನನ್ನು ನರಹತ್ಯೆಯ ಆರೋಪದ ಮೇಲೆ ಬಂಧಿಸಲಾಗಿದೆ. ಘಟನೆಯ ದೃಶ್ಯಾವಳಿಗಳು ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಕೆಎಸ್ಆರ್ ಟಿಸಿ ಆಂತರಿಕ ತನಿಖೆಯನ್ನು ಮಾಡಿ, ತನಿಖೆ ಸ್ಪಷ್ಟವಾದ ನಂತರ ಸೇವೆಯಿಂದ ಅಮಾನತುಗೊಳಿಸಲಾಗಿದೆ.

You may also like

Leave a Comment