Home » Lorry and car accident: ಗೋವಾ ಟ್ರಿಪ್‌ಗೆ ಹೋದ ಫ್ಯಾಮಿಲಿ, ಮನೆಗೆಂದು ವಾಪಾಸು ಬರುವಾಗ ತೀವ್ರ ಅಪಘಾತ! ಮೂರು ತಿಂಗಳ ಮಗು ಸೇರಿ ಮೂವರ ಸಾವು

Lorry and car accident: ಗೋವಾ ಟ್ರಿಪ್‌ಗೆ ಹೋದ ಫ್ಯಾಮಿಲಿ, ಮನೆಗೆಂದು ವಾಪಾಸು ಬರುವಾಗ ತೀವ್ರ ಅಪಘಾತ! ಮೂರು ತಿಂಗಳ ಮಗು ಸೇರಿ ಮೂವರ ಸಾವು

0 comments
Lorry and car accident

Lorry and car accident: ಗೋವಾ (Goa) ಟ್ರಿಪ್‌ಗೆಂದು ಕುಟುಂಬ ಸಮೇತ ಹೋದವರು ಇನ್ನೇನು ಊರು ಸೇರಬೇಕನ್ನುವಷ್ಟರಲ್ಲಿ ಜವರಾಯ ತನ್ನ ಉಗ್ರರೂಪ ತೋರಿಸಿ ಬಿಟ್ಟಿದ್ದಾನೆ. ಹೌದು, ಚಲಿಸುತ್ತಿದ್ದ ಲಾರಿಗೆ (Lorry and car accident) ಹಿಂಬದಿಯಿಂದ ಫಾರ್ಚುನರ್‌ ಕಾರು ಡಿಕ್ಕಿ ಹೊಡೆದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಷ್ಟು ಮಾತ್ರವಲ್ಲದೇ ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಮೂರು ತಿಂಗಳ ಮಗು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದೆ.

ಈ ಘಟನೆ ಚಿತ್ರದುರ್ಗ ತಾಲೂಕಿನ ವಿಜಯಪುರ ಗೊಲ್ಲರಹಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಅಪಘಾತಕ್ಕೀಡಾದ ಕುಟುಂಬ ಬೆಂಗಳೂರಿನ ಹೆಚ್‌ಎಸ್‌ಆರ್‌ ಲೇಔಟ್‌ ನಲ್ಲಿ ವಾಸಿಸುತ್ತಿದ್ದರೆನ್ನಲಾಗಿದೆ. ಈ ಘಟನೆ ಬೆಳಗಿನ ಜಾವ 2.30ರ ಸುಮಾರಿಗೆ ನಡೆದಿದೆ. ವಿಜಯಪುರ ಗೊಲ್ಲರಹಟ್ಟಿ ಬಳಿ ಫಾರ್ಚುನರ್‌ ಕಾರ್‌ ಮುಂಭಾಗದಲ್ಲಿ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.

ತಬ್ಸುಮ್‌(28), ಸಂಬಂಧಿ ಜಾಕೀರ್‌ ಅಹ್ಮದ್‌ (60) ಸ್ಥಳದಲ್ಲೇ ಮೃತರಾದರೆ, ಮೂರು ತಿಂಗಳ ಮಗು ಫಾತಿಮಾ ಜಿಲ್ಲಾಸ್ಪತ್ರೆಯಲ್ಲಿ ಸಾವಿಗೀಡಾಗಿದೆ. ಕಾರಿನಲ್ಲಿದ್ದ ಆರು ಜನ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಇದನ್ನು ಓದಿ: Student Death: ಫ್ರೀ ಬಸ್ಸಿನಿಂದ ಬಿದ್ದು ವಿದ್ಯಾರ್ಥಿನಿ ಸಾವು! 

You may also like

Leave a Comment