Home » Accident: ಕಾರು ಮತ್ತು ಲಾರಿ ನಡುವಿನ ಅಪಘಾತ: ಕಾರು ಚಾಲಕ ಮೃತ್ಯು

Accident: ಕಾರು ಮತ್ತು ಲಾರಿ ನಡುವಿನ ಅಪಘಾತ: ಕಾರು ಚಾಲಕ ಮೃತ್ಯು

0 comments

Accident: ಸುಳ್ಯ-ಕಾಸರಗೋಡು ಅಂತರಾಜ್ಯ ರಸ್ತೆಯ ಕಾಸರಗೋಡಿನ ಕುಂಟಾರು- ಮುರೂರು ರಸ್ತೆಯಲ್ಲಿ ಓಮ್ಮಿ ಕಾರು ಮತ್ತು ಲಾರಿ ನಡುವಿನ ಅಪಘಾತದಲ್ಲಿ (Accident) ಸುಳ್ಯದ ಅಜ್ಜಾವರದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ. ಮೃತ ವ್ಯಕ್ತಿ ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಮುಹಮ್ಮದ್ ಕುಂಞ (65) ಎಂದು ತಿಳಿದು ಬಂದಿದೆ.

ಮುಹಮ್ಮದ್ ಕುಂಞ ಅವರು ತಮ್ಮ ಮಗನನ್ನು ಕಾಸರಗೋಡಿಗೆ ಬಿಟ್ಟು ತನ್ನ ಕಾರು ಚಲಾಯಿಸಿಕೊಂಡು ಸುಳ್ಯಕ್ಕೆ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರು ಚಲಾಯಿಸುತ್ತಿದ್ದ ಮುಹಮ್ಮದ್ ಜುಂಞ ಅವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

You may also like

Leave a Comment