ಹಳೆಯಂಗಡಿ ಮೂಲದ ದಂಪತಿ ಹಾಗೂ ನಾಲ್ಕು ತಿಂಗಳ ಮಗು ಸೇರಿದಂತೆ ಮೂರು ಜನ ಸೌದಿ ಅರೇಬಿಯಾದ ರಿಯಾದ್ ಹಾಗೂ ಮೆಕ್ಕಾ ಹೆದ್ದಾರಿಯ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನು ಈ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಅಲ್ ಕಸ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Political News: ”ವಿಕಸಿತ ಭಾರತ” ಸಂದೇಶ ಕಳುಹಿಸುವುದನ್ನು ನಿಲ್ಲಿಸಿ : ಕೇಂದ್ರಕ್ಕೆ ಚುನಾವಣಾ ಆಯೋಗದ ಖಡಕ್ ಸೂಚನೆ
ಈ ಕುಟುಂಬವು ಕತಾರ್ ನಿಂದ ಮಕ್ಕಾಗೆ ತೆರಲುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ಅಪಘಾತದಲ್ಲಿ ಮೃತ ದುರ್ದೈವಿಗಳನ್ನು ಮಕ್ಕಾ ಡಿಕೆಎಸ್ಸಿಸಿ ಮುಖಂಡ ಇಬ್ರಾಹಿಂ ಕನ್ನಂಗಾರ್ ಸಂಬಂಧಿಕರು ಎಂಬುದಾಗಿ ಮೂಲಗಳು ತಿಳಿಸಿವೆ.
ಆದರೆ ಇದುವರೆಗೂ ಈ ಅಪಘಾತಕ್ಕೆ ಕಾರಣವೇನು ಎಂಬುದು ಇದುವರೆಗೂ ತಿಳಿದುಬಂದಿಲ್ಲ, ಸೌದಿ ಅರೇಬಿಯಾ ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
