Home » Crime News: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಹಲ್ಲೆಗೆ ಯತ್ನ ; ಉದ್ಯಮಿ ಶ್ರೀನಿವಾಸ್ ನಾಯ್ಡು ವಿರುದ್ಧ FIR !

Crime News: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಹಲ್ಲೆಗೆ ಯತ್ನ ; ಉದ್ಯಮಿ ಶ್ರೀನಿವಾಸ್ ನಾಯ್ಡು ವಿರುದ್ಧ FIR !

0 comments
Muttappa Rai

Muttappa Rai: ಮಾಜಿ ಡಾನ್ ಮುತ್ತಪ್ಪ (Muttappa Rai)  ರೈ ಪುತ್ರ ರಿಕ್ಕಿ ರೈ (Rikki Rai) ಮೇಲೆ ಉದ್ಯಮಿ ಶ್ರೀನಿವಾಸ್ ನಾಯ್ಡು (Srinivas Naidu) ಹಲ್ಲೆಗೆ (Crime News) ಯತ್ನಿಸಿದ್ದಾರೆ ಎಂದು ಆರೋಪಿಸಿದ್ದು, ಈ ಹಿನ್ನೆಲೆ ನಾಯ್ಡು ವಿರುದ್ಧ ರಿಕ್ಕಿ ರೈ ಕಾರು ಚಾಲಕ ಸೋಮಶೇಖರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಮೇ.26ರಂದು ರಾತ್ರಿ ರಿಕ್ಕಿ ರೈ ಊಟಕ್ಕೆ ಹೋಟೆಲ್’ಗೆ ಹೋದ ಸಂದರ್ಭದಲ್ಲಿ ಶ್ರೀನಿವಾಸ್​ ನಾಯ್ಡು ಗ್ಯಾಂಗ್’ನೊಂದಿಗೆ ರಿಕ್ಕಿ ಮೇಲೆ
ಹಲ್ಲೆ ನಡೆಸಲು ಮುಂದಾಗಿದೆ. ಗ್ಯಾಂಗ್ ದಾಳಿಯಿಂದ ರೈ ಹಣೆಗೆ ಪೆಟ್ಟು ಬಿದ್ದಿದೆ. ಘಟನೆ ವೀಕ್ಷಿಸಿದವರು ತಕ್ಷಣವೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿದರಾದರೂ ಅಷ್ಟರಲ್ಲಿ ಶ್ರೀನಿವಾಸ್​ ನಾಯ್ಡು ಹಾಗೂ ಗ್ಯಾಂಗ್’ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಕಾರು ಚಾಲಕ ಸೋಮಶೇಖರ್ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಮೇರೆಗೆ
ಶ್ರೀನಿವಾಸ್​ ನಾಯ್ಡು ಮೇಲೆ ಎಫ್ ಐ ಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇನ್ನು ರಿಕ್ಕಿ ರೈ ಮತ್ತು ಶ್ರೀನಿವಾಸ್ ನಾಯ್ಡು ಇಬ್ಬರೂ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ, ಮಾಜಿ ಡಾನ್, ರಿಕ್ಕಿ ರೈ ತಂದೆ ಮುತ್ತಪ್ಪ ರೈ ನಿಧನದ ನಂತರ ಆ ಗ್ಯಾಂಗ್’ನಿಂದ ಶ್ರೀನಿವಾಸ್ ನಾಯ್ಡು ಹೊರ ನಡೆದಿದ್ದರು. ಈ ಕಾರಣದಿಂದಲೇ ರಿಕ್ಕಿ ರೈಗೆ ನಾಯ್ಡು ಮೇಲೆ ದ್ವೇಷ ಹುಟ್ಟಿಕೊಂಡಿತು. ಅಲ್ಲದೆ, ರಿಕ್ಕಿ ಘಟನೆಗೆ ಮೂರು ತಿಂಗಳು ಮೊದಲು ನಾಯ್ಡುಗೆ ವಾರ್ನ್ ಕೂಡ ಮಾಡಿದ್ದ.
‘ನಿನ್ನ ಕಾರನ್ನು ಸುಟ್ಟು ಬೂದಿ ಮಾಡುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದ.

ಹೇಳಿದಂತೆ ರಿಕ್ಕಿ ರೈ ನಾರಾಯಣ ಸ್ವಾಮಿ ಎಂಬಾತನ ಮೂಲಕ ಕಾರಿಗೆ ಬೆಂಕಿ ಹಚ್ಚುವ ಪ್ಲಾನ್ ಮಾಡಿದ್ದಾನೆ. ಮಧ್ಯರಾತ್ರಿ ಶ್ರೀನಿವಾಸ್ ನಾಯ್ಡು ಫ್ಲ್ಯಾಟ್‌ಗೆ ನುಗ್ಗಿ ಅಪಾರ್ಟ್‌ಮೆಂಟ್‌ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬುಲೆಟ್ ಮತ್ತು ಕಾರಿನಿಂದ ಪೆಟ್ರೋಲ್ ತೆಗೆದು, ಅದನ್ನು ಕಾರಿಗೆ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಕಿ ರೈ ಸೇರಿದಂತೆ 8 ಜನರ ಮೇಲೆ ಪೊಲೀಸರು 188 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ್ದರು.

 

ಇದನ್ನು ಓದಿ: KPSC Recruitment 2023: KPSC ಹುದ್ದೆಗೆ ಅರ್ಜಿ ಆಹ್ವಾನ ; ನೇರ ನೇಮಕಾತಿ- ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ!! 

You may also like

Leave a Comment