7
Pavitra Gowda: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಆರು ತಿಂಗಳುಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದ್ದ ಪವಿತ್ರಾ ಗೌಡ, ಇದೀಗ ಬೇಲ್ ಮೇಲೆ ಆಚೆ ಬಂದಿದ್ದು, ತಮ್ಮ ಸಾಕು ನಾಯಿಗಳನ್ನು ಮನೆಗೆ ಶಿಫ್ಟ್ ಮಾಡುವ ತಯಾರಿಯಲ್ಲಿದ್ದಾರೆ.
ತಮ್ಮ ಸಿಬ್ಬಂದಿಯ ಮೂಲಕ ಮತ್ತೆ ಮನೆಗೆ ಕರೆತರಲು ಸೂಚಿಸಿದ್ದಾರೆ. ನಟ ದರ್ಶನ್ ಮನೆಯಲ್ಲಿ ಪವಿತ್ರಾ ಗೌಡಳ ಮೆಚ್ಚಿನ ಶ್ವಾನಗಳು ಇದೆ.
ಆರೋಪಿ ಪವಿತ್ರಾ ಗೌಡ ಶ್ವಾನ ಪ್ರಿಯೆ. ಇವರ ಬಳಿ ಮೂರು ತಳಿಯ ಶ್ವಾನಗಳು ಇದ್ದವು. ಮೂರರ ಪೈಕಿ ಒಂದನ್ನು ಕುಟುಂಬದವರು ತೆಗೆದುಕೊಂಡು ಹೋಗಿದ್ದರು. ಉಳಿದ ಬಿಳಿ ಫ್ರೆಂಚ್ ಬುಲ್‌ಡಾಗ್, ಬೆಲ್ಜಿಯನ್ ಮಾಲಿನೋಯಿಸ್ ಈ ಎರಡು ನಾಯಿ ಪವಿತ್ರಾ ಅರೆಸ್ಟ್ ಆದ ಬಳಿಕ ದರ್ಶನ್ ಮನೆಗೆ ಶಿಫ್ಟ್ ಮಾಡಲಾಗಿತ್ತು.
