Home » Online shop: ಇ-ಕಾಮರ್ಸ್‌ ತಾಣಗಳಲ್ಲಿ ಪಾಕ್‌ ಸರಕು ಮಾರಾಟ ಮಾಡಿದರೆ ಕ್ರಮ ಜಾರಿ: ಪ್ರಲ್ಹಾದ್ ಜೋಶಿ

Online shop: ಇ-ಕಾಮರ್ಸ್‌ ತಾಣಗಳಲ್ಲಿ ಪಾಕ್‌ ಸರಕು ಮಾರಾಟ ಮಾಡಿದರೆ ಕ್ರಮ ಜಾರಿ: ಪ್ರಲ್ಹಾದ್ ಜೋಶಿ

0 comments

Online shop: ಇ-ಕಾಮರ್ಸ್‌ (Online shop) ಪ್ಲಾಟ್ಫಾರ್ಮ್ಗಳು ಪಾಕಿಸ್ತಾನದ ಸರಕುಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ತಕ್ಷಣವೇ ಇದನ್ನು ನಿಲ್ಲಿಸಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪಾಕಿಸ್ತಾನದ ಸರಕುಗಳ ಮಾರಾಟ ಮಾಡದಂತೆ ಎಲ್ಲಾ ವಾಣಿಜ್ಯ ಕಂಪನಿಗಳು ಮತ್ತು ಕಾರ್ಪೋರೇಷನ್‌ ಸಂಸ್ಥೆಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಈ ಹಿಂದೆಯೇ ನೋಟಿಸ್‌ ಜಾರಿ ಮಾಡಿದೆ. ಆದರೂ ಕೆಲ ಇ-ಕಾಮರ್ಸ್‌ ತಾಣಗಳು, ಸಂಸ್ಥೆಗಳು ಸರಕು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಕೇಂದ್ರ ಸರ್ಕಾರ ಇದನ್ನು ಸಹಿಸುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.

ಅಮೇಜಾನ್‌, ಫ್ಲಿಪ್‌ಕಾರ್ಟ್‌, ಯು ಬೈ ಇಂಡಿಯಾ, Etsy, ದಿ ಫ್ಲ್ಯಾಗ್ ಕಂಪನಿ ಮತ್ತು ಕಾರ್ಪೊರೇಷನ್‌ಗಳಿಗೆ ಸರಕು ಮಾರಾಟ ಮಾಡದಂತೆ ನೋಟಿಸ್‌ ಜಾರಿ ಮಾಡಲಾಗಿದೆ.

ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಪಾಕಿಸ್ತಾನ ಸಂಬಂಧಿತ ಎಲ್ಲಾ ವಸ್ತುಗಳನ್ನು ತಕ್ಷಣವೇ ತೆಗೆದುಹಾಕಬೇಕು ಮತ್ತು ರಾಷ್ಟ್ರೀಯ ಕಾನೂನನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಕದನ ವಿರಾಮ ಘೋಷಣೆಯಾದರೂ ಪಾಕಿಸ್ತಾನದ ಜತೆಗೆ ವ್ಯವಹಾರ, ಮಾತುಕತೆ ಹಾಗೂ ಇತರ ಪ್ರಕ್ರಿಯೆಗಳು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ. ಪಾಕಿಸ್ತಾನದ ವಿರುದ್ಧ ಏನೇ ಮಾತುಕತೆ ಮಾಡುವುದಿದ್ದರೂ ಅದು ಭಯೋತ್ಪಾದನೆ, ಪಿಒಕೆ ವಿಚಾರವನ್ನು ಒಳಗೊಂಡಿರುತ್ತದೆ ಎಂದು ಪ್ರಧಾನಿ ಮೋದಿ ಕೂಡ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಸದ್ಯದ ಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ಹಾಗೂ ಪಾಕಿಸ್ತಾನದ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಇ ಕಾಮರ್ಸ್ ತಾಣಗಳಿಗೆ ಸಚಿವ ಜೋಶಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

You may also like