Home » ನಾನು ಮೋದಿ ಭಕ್ತ : ಬಹಿರಂಗವಾಗಿಯೇ ಹೇಳಿಕೆ ನೀಡಿದ ಹಿರಿಯ ನಟ ಅನಂತ್‌ ನಾಗ್‌

ನಾನು ಮೋದಿ ಭಕ್ತ : ಬಹಿರಂಗವಾಗಿಯೇ ಹೇಳಿಕೆ ನೀಡಿದ ಹಿರಿಯ ನಟ ಅನಂತ್‌ ನಾಗ್‌

0 comments

ಕನ್ನಡ ಸಿನಿಮಾ ರಂಗದ ಕಲಾವಿದ, ನಟ ಅನಂತ್ ನಾಗ್ ಮೋದಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದು, ರಾಷ್ಟ್ರ ಮೆಚ್ಚಿದ ಜನ ನಾಯಕ ನರೇಂದ್ರ ಮೋದಿ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ (Narendra Modi) ಎಂಟೂವರೆ ವರ್ಷಗಳಲ್ಲಿ ಒಂದು ದಿನವೂ ರಜೆ ತಗೆದುಕೊಳ್ಳದೇ ಕೆಲಸ ಮಾಡುತ್ತಿದ್ದು, ಅವರ ಕೆಲಸಗಳಿಗೆ ತಾನು ಮನಸೋತಿದ್ದೇನೆ. ಹಾಗಾಗಿ ನಾನು ಮೋದಿ ಭಕ್ತ ಎಂದು ಹೇಳಿಕೊಳ್ಳಲು ಯಾವುದೇ ಸಂಕೋಚವಿಲ್ಲ’ ಎಂದು ನಟ ಅನಂತ್ ನಾಗ್ ಬಹಿರಂಗವಾಗಿ ಘೋಷಿಸಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ‘ರಾಷ್ಟ್ರೀಯ ಪತ್ರಿಕಾ ದಿನಾಚರಣೆ’ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ನಟ ಅನಂತ್ ನಾಗ್ ಮೋದಿಯ ನ್ನು ಹೊಗಳಿ ಮೋದಿಯ ಭಕ್ತ ಎಂದು ಘಂಟಾ ಘೋಷವಾಗಿ ಹೇಳಿಕೊಂಡಿದ್ದಾರೆ.

ಅನಂತ್ ನಾಗ್ (Anant Nag)ಬಿಜೆಪಿ ಪರವಾಗಿ ಈಗಾಗಲೇ ಸಾಕಷ್ಟು ಒಳ್ಳೆಯ ಅಭಿಪ್ರಾಯಗಳನ್ನು ಹೇಳಿದ್ದು,ಸಂಘ ಪರಿವಾರದ ಅನೇಕ ಕಾರ್ಯಕ್ರಮಗಳಲ್ಲಿಯೂ ಕೂಡ ಭಾಗಿಯಾಗಿದ್ದಾರೆ. ಮೋದಿಯ ಸಾಧನೆಯನ್ನು ಹಲವು ಬಾರಿ ಕೊಂಡಾಡಿದ್ದು, ಇದೇ ಮೊದಲ ಬಾರಿಗೆ ಅವರು ತಾವು ಮೋದಿ ಭಕ್ತ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

You may also like

Leave a Comment