Home » Actor Darshan: ನಟ ದರ್ಶನ್‌ ಜಾಮೀನು ವಿಚಾರಣೆ! ಬಳ್ಳಾರಿಯಿಂದ ಬೆಂಗಳೂರಿಗೆ ಕರೆತರಲು ಹೆಲಿಕಾಪ್ಟರ್ ಬುಕ್?!

Actor Darshan: ನಟ ದರ್ಶನ್‌ ಜಾಮೀನು ವಿಚಾರಣೆ! ಬಳ್ಳಾರಿಯಿಂದ ಬೆಂಗಳೂರಿಗೆ ಕರೆತರಲು ಹೆಲಿಕಾಪ್ಟರ್ ಬುಕ್?!

0 comments

Actor Darshan: ಸ್ಯಾಂಡಲ್‌ವುಡ್ ನಟ ದರ್ಶನ್ ಜೈಲು ಸೇರಿ ಈಗಾಗಲೇ 3 ತಿಂಗಳು ಕಳೆದಿದೆ. ದರ್ಶನ್ ಯಾವಾಗ ಬರ್ತಾರೆ ಎಂದು ಅಭಿಮಾನಿಗಳು ಕಾದು ಕೂತಿದ್ದಾರೆ. ಈಗಾಗಲೇ ಜಾಮೀನು ಪಡೆಯಲು ವಕೀಲರ ಮೂಲಕ ದರ್ಶನ್ (Actor Darshan) ಕೋರ್ಟ್‌ನಲ್ಲಿ ಅರ್ಜಿ ಸಲ್ಲಿದ್ದಾರೆ. ಇನ್ನು ಪ್ರಕರಣದಲ್ಲಿ ಈಗಾಗಲೇ ಮೂವರಿಗೆ ಜಾಮೀನು ಸಿಕ್ಕಿದೆ.

ಸದ್ಯ ಶೀಘ್ರದಲ್ಲೇ ನಟ ದರ್ಶನ್ (Actor Darshan) ಜಾಮೀನು ಸಿಗುತ್ತದೆ ಎನ್ನುವ ನಿರೀಕ್ಷೆ ಕೆಲವರಲ್ಲಿದ್ದು, ಮಂಗಳವಾರ ನಟ ದರ್ಶನ್‌ರನ್ನು ಭೇಟಿ ಮಾಡಿದ್ದ ವಕೀಲರು, ಸೆಷನ್ಸ್ ಕೋರ್ಟ್‌ನಲ್ಲೇ ಜಾಮೀನು ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದರು. ಹಾಗಾಗಿ ಇದೀಗ ಅಭಿಮಾನಿಗಳ ಸಂಭ್ರಮ ಹೆಚ್ಚಾಗಿದೆ.ಈ ಬೆನ್ನಲ್ಲೇ ನಟ ದರ್ಶನ್‌ಗೆ ಜಾಮೀನು ಸಿಕ್ಕ ಬಳಿಕ ಬಳ್ಳಾರಿಯಿಂದ ಬೆಂಗಳೂರಿಗೆ ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.

ಒಂದು ವೇಳೆ ನಟ ದರ್ಶನ್‌ ಬಿಡುಗಡೆ ಆದಲ್ಲಿ ಅವರನ್ನ ಹೆಲಿಕಾಪ್ಟರ್ ನಲ್ಲಿ ಬಳ್ಳಾರಯಿಂದ ಬೆಂಗಳೂರಿಗೆ ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅದಕ್ಕಾಗಿ ಅನುಮತಿ ಪಡೆದು ಕೊಳ್ಳುವ ಕೆಲಸ ಆರಂಭವಾಗಿದೆ ಎಂದು ಸುದ್ದಿಯಾಗಿದೆ. ಆದರೆ ಹೆಲಿಕಾಪ್ಟರ್ ಬುಕ್ ಮಾಡುವ ಯಾವುದೇ ಪ್ರಯತ್ನ ನಡೆಯುತ್ತಿಲ್ಲ, ಸದ್ಯಕ್ಕೆ ಕಾನೂನು ಹೋರಾಟ ಮಾತ್ರ ನಡೆಯುತ್ತಿದೆ ಎಂದು ನಟ ದರ್ಶನ್ ಆಪ್ತ‌ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

You may also like

Leave a Comment