Home » Actor Darshan: ನಟ ದರ್ಶನ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

Actor Darshan: ನಟ ದರ್ಶನ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

296 comments

Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗೆ ಬಂದಿದ್ದ ನಟ ದರ್ಶನ್‌ ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಗೆ ಬೆನ್ನು ನೋವಿನ ಕಾರಣದಿಂದ ದಾಖಲಾಗಿದ್ದರು. ಇದೀಗ ನಟ ದರ್ಶನ್‌ ಆಸ್ಪತ್ರೆಯಿಂದ ಡಿಸ್ಟಾರ್ಜ್‌ ಆಗಿದ್ದಾರೆ ಎಂದು ವರದಿಯಾಗಿದೆ. ಡಿ.13 ರಂದು ಪೂರ್ಣಾವಧಿಯ ಬೇಲ್‌ ದೊರಕಿದೆ.

ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್‌ ಕಾರು ಹತ್ತಿ ತಮ್ಮ ನಿವಾಸಕ್ಕೆ ಹೋಗಿದ್ದಾರೆ. ನಟ ದರ್ಶನ್‌ ಅವರಿಗೆ ಯಾವುದೇ ಶಸ್ತ್ರಚಿಕಿತ್ಸೆ ನಡೆದಿಲ್ಲ ಎಂದು ಹೇಳಲಾಗಿದೆ. ಫಿಜಿಯೋಥೆರಪಿ ಮೂಲಕ ಮಾತ್ರ ಚಿಕಿತ್ಸೆ ಮಾಡಲಾಗಿದೆ.

ಕಳೆದ ಒಂದೂವರೆ ತಿಂಗಳಿನಿಂದ ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ದರ್ಶನ್‌ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ಬಳ್ಳಾರಿ ಜೈಲಿನಲ್ಲಿದ್ದಾಗ ದರ್ಶನ್‌ ಅವರಿಗೆ ಬೆನ್ನುನೋವಿನ ಸಮಸ್ಯೆ ಹೆಚ್ಚಾಗಿದ್ದು, ಆಪರೇಷನ್‌ ಮಾಡಿಸದಿದ್ದರೆ ಲಕ್ವ ಹೊಡೆಯುತ್ತದೆ ಎಂದು ವಕೀಲರು ವಾದ ಮಂಡನೆ ಮಾಡಿದ್ದು, ಅನಂತರ ನ್ಯಾಯಾಲಯವು ಮಧ್ಯಂತರ ಜಾಮೀನನ್ನು ನೀಡಿತ್ತು. ಇದೀಗ ದರ್ಶನ್‌ಗೆ ವೈದ್ಯರು ಫಿಸಿಯೋಥೆರಪಿ ಮಾತ್ರ ಮಾಡಿದ್ದು, ವಿಶ್ರಾಂತಿ ಪಡೆಯಲು ವೈದ್ಯರು ದರ್ಶನ್‌ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ವೈದ್ಯರ ಸಲಹೆಯ ಮೇರೆಗೆ ನಟ ದರ್ಶನ್‌ ಡಿಸ್ಚಾರ್ಜ್‌ ಆಗಿ ಮನೆಗೆ ತೆರಳಿದ್ದಾರೆ.

You may also like

Leave a Comment