Home » Darshan: ನಟ ದರ್ಶನ್ ‘ಬೆನ್ನು ನೋವಿನ ನಾಟಕ’ಕ್ಕೆ ತೆರೆ? ಜಿಲ್ಲಾಧಿಕಾರಿಗೆ ವೈದ್ಯರು ಹೇಳಿದ್ದೇನು?

Darshan: ನಟ ದರ್ಶನ್ ‘ಬೆನ್ನು ನೋವಿನ ನಾಟಕ’ಕ್ಕೆ ತೆರೆ? ಜಿಲ್ಲಾಧಿಕಾರಿಗೆ ವೈದ್ಯರು ಹೇಳಿದ್ದೇನು?

0 comments

Darshan: ಕಳೆದ ಕೆಲ ತಿಂಗಳಿಂದ ಪರಪ್ಪನ ಅಗ್ರಹಾರ (Parappana Agrahara) ವಿಪರೀತ ಬೆನ್ನು ನೋವಿನಿಂದ ಬಳಲುತ್ತಿದ್ದ ನಟ ದರ್ಶನ್ (Actor Darshan) ಗೆ ಇದೀಗ ಬೆನ್ನು ನೋವಿನ ನಾಟಕದಿಂದ ಮುಕ್ತಿ ಸಿಕ್ಕಿದೆಯೇ ಎಂಬ ಕುತೂಹಲ ಮೂಡಿದೆ.

ಹೌದು, ದರ್ಶನ್ ಮೊದಲ ಬಾರಿಗೆ ಈ ಪ್ರಕರಣದಲ್ಲಿ ಜೈಲು ಸೇರಿದ್ದಾಗ, ತೀವ್ರ ಬೆನ್ನುನೋವು ಇದೆ, ನಿಲ್ಲಲು ಮತ್ತು ಕೂರಲು ಸಾಧ್ಯವಾಗುತ್ತಿಲ್ಲ ಎಂದು ಕೋರ್ಟ್‌ಗೆ ಮೊರೆ ಹೋಗಿದ್ದರು. ಎರಡನೇ ಬಾರಿ ಪರಪ್ಪನ ಅಗ್ರಹಾರಕ್ಕೆ ಬಂದಾಗಲೂ ದರ್ಶನ್ ಅದೇ ಬೆನ್ನುನೋವಿನ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು. ಆದರೆ, ಈ ಬಾರಿ ಜಾಮೀನು ನಿರಾಕರಿಸಿದ ಕೋರ್ಟ್, ಜೈಲಿನಲ್ಲೇ ಸೂಕ್ತ ಚಿಕಿತ್ಸೆ ಪಡೆಯಲು ಅನುಮತಿ ನೀಡಿತ್ತು. ಅದರಂತೆ, ಸಿ.ವಿ. ರಾಮನ್ ಆಸ್ಪತ್ರೆಯ ನಾಲ್ವರು ವೈದ್ಯರ ತಂಡವು ವಾರಕ್ಕೆ ಎರಡರಿಂದ ಮೂರು ಬಾರಿ ಫಿಸಿಯೋಥೆರಪಿ ಚಿಕಿತ್ಸೆ ನೀಡುತ್ತಿತ್ತು.

ಸಧ್ಯ ಪರಪ್ಪನ ಅಗ್ರಹಾರದಲ್ಲಿ ಫಿಸಿಯೊಥೆರಪಿ ಪಡೆಯುತ್ತಿದ್ದ ನಟ ದರ್ಶನ್ ಗೆ ಇದೀಗ ದಿಢೀರ್ ಆಗಿ ಬೆನ್ನು ನೋವಿನ ಚಿಕಿತ್ಸೆಯನ್ನು ನಿಲ್ಲಿಸಲಾಗಿದ್ದು, ಇನ್ನು ಫಿಸಿಯೊಥೆರಪಿ ಅಗತ್ಯವಿಲ್ಲ ಎಂದು ಸಿ.ವಿ ರಾಮನ್ ಆಸ್ಪತ್ರೆ ವೈದ್ಯರ ತಂಡದಿಂದ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ದರ್ಶನ್ ಎರಡನೇ ಬಾರಿ ಜೈಲು ಸೇರಿದ ಬಳಿಕ 10-12 ಕೆಜಿ ತೂಕ ಕಡಿಮೆಯಾದುದು ಗಮನಕ್ಕೆ ಬಂದಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ಅವರ ಬೆನ್ನು ನೋವು ಈಗ ಸ್ವಾಭಾವಿಕವಾಗಿ ಕಡಿಮೆಯಾಗಿರಬಹುದೆಂಬ ಅಭಿಪ್ರಾಯ ಜೈಲು ವಲಯದಲ್ಲಿ ಮೂಡಿದೆ.

You may also like