Home » Actor Darshan: ನಟ ದರ್ಶನ್‌ ಫ್ಯಾನ್ಸ್‌ಗೆ ಆರ್‌ಟಿಒ ಎಚ್ಚರಿಕೆ

Actor Darshan: ನಟ ದರ್ಶನ್‌ ಫ್ಯಾನ್ಸ್‌ಗೆ ಆರ್‌ಟಿಒ ಎಚ್ಚರಿಕೆ

3 comments

Actor Darshan: ವಾಹನಗಳ ಮೇಲೆ ಬೇಕಾಬಿಟ್ಟಿ ಬರಹಗಳನ್ನು ಅಳವಡಿಸಿಕೊಳ್ಳುವುದು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ. ಅದರಲ್ಲೂ ನಟ ದರ್ಶನ್‌ ಜೈಲುಪಾಲಾದ ಮೇಲಂತೂ ಆತನ ಅಭಿಮಾನಿಗಳು ವಾಹನಗಳ ಮೇಲೆ ಕೈದಿ ನಂಬರ್‌ ಹಾಕಿಸಿಕೊಂಡು ಅಪಾರ ಅಭಿಮಾನ ಮೆರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್‌ ಫ್ಯಾನ್ಸ್‌ಗೆ ಆರ್‌ಟಿಒ ಎಚ್ಚರಿಕೆ ನೀಡಿದೆ.

ವಾಹನಗಳ ಮೇಲೆ ಬೇಕಾಬಿಟ್ಟಿಯಾಗಿ ಸ್ಟಿಕ್ಕರ್‌ ಅಂಟಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೆಚ್ಚುವರಿ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ್‌ ಎಚ್ಚರಿಕೆ ನೀಡಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್‌ಗೆ ನೀಡಿದ ಖೈದಿ ಸಂಖ್ಯೆ, ಈತ ಬಳ್ಳಾರಿಯಲ್ಲಿ ನೀಡಿದ ಖೈದಿ ಸಂಖ್ಯೆಯನ್ನು ಟ್ರೆಂಡ್‌ ಮಾಡುತ್ತಿದ್ದು, ಆಟೋ, ಬೈಕ್‌ ಸೇರಿ ತಮ್ಮ ವಾಹನಗಳಲ್ಲಿ ಸ್ಟಿಕ್ಕರ್‌ ಅಂಟಿಸಿ ಟ್ರೆಂಡ್‌ ಮಾಡುತ್ತಿರುವುದು ಕಂಡು ಬಂದಿದೆ.

You may also like

Leave a Comment