Home » Royal Movie: ಜೈಲಿನಿಂದ ಹೊರ ಬಂದ ನಂತರ ಕುಟುಂಬ ಸಮೇತ ಸಿನಿಮಾ ನೋಡಿದ ನಟ ದರ್ಶನ್‌

Royal Movie: ಜೈಲಿನಿಂದ ಹೊರ ಬಂದ ನಂತರ ಕುಟುಂಬ ಸಮೇತ ಸಿನಿಮಾ ನೋಡಿದ ನಟ ದರ್ಶನ್‌

0 comments

Actor Darshan: ನಟ ದರ್ಶನ್‌ ಜೈಲಿನಿಂದ ಹೊರ ಬಂದ ನಂತರ ಯಾವ ಸಿನಿಮಾದ ಕುರಿತು ನೋಡಿರುವ, ಮಾತಾಡಿರುವ ಕುರಿತು ವರದಿಯಾಗಿರಲಿಲ್ಲ. ಆದರೆ ಇದೀಗ ಅವರು ತಮ್ಮ ಕುಟುಂಬ ಸಮೇತ ನವನಟನ ಸಿನಿಮಾವನ್ನು ನೋಡಿದ್ದು ಮಾತ್ರವಲ್ಲದೇ ಸಿನಿಮಾ ವೈಖರಿಗೆ ಖುಷಿಗೊಂಡಿದ್ದಾರೆ.

“ರಾಯಲ್”‌ ಸಿನಿಮಾವನ್ನು ತಮ್ಮ ಕುಟುಂಬ ಸಮೇತ ನೋಡಿ ಪ್ರಶಂಸೆ ಮಾಡಿದ್ದಾರೆ ಡಿ ಬಾಸ್‌. ವಿರಾಟ್‌ ನಾಯಕನಾಗಿದ್ದು, ಈ ಚಿತ್ರವನ್ನು ದರ್ಶನ್‌ ಸಹೋದರ ದಿನಕರ್‌ ನಿರ್ದೇಶನ ಮಾಡಿದ್ದಾರೆ. ಜ.24 ರಂದು ಈ ಸಿನಿಮಾ ತೆರೆಕಾಣಲಿದೆ.

ಮಲ್ಲೇಶ್ವರಂ ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್‌ ಸಿನಿಮಾ ನೋಡಿದ್ದಾರೆ. ಚಿತ್ರ ಇಂದಿನ ಟ್ರೆಂಡ್‌ಗೆ ತಕ್ಕ ಹಾಗೆ ಇದೆ, ಪ್ರೇಕ್ಷಕರಿಗೆ ಇದು ಖುಷಿ ನೀಡಲಿದೆ ಎಂದು ತಮ್ಮ ಅಭಿಪ್ರಾಯನ್ನು ಹೇಳಿದ್ದಾರೆ.

ಜಯಣ್ಣ-ಭೋಗಣ್ಣ ಚಿತ್ರ ನಿರ್ಮಾಣ ಮಾಡಿದ್ದು, ದಿನಕರ್‌ ನಿರ್ದೇಶನ ಮಾಡಿದ್ದಾರೆ. ಸಂಜನಾ ನಾಯಕಿ, ವಿರಾಟ್‌ ನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ.

You may also like