Actor Darshan: ನಟ ದರ್ಶನ್ ಫ್ಯಾನ್ಸ್ ಪೇಜ್ ನಿಂದ ಪ್ರಥಮ್ ಗೆ ಬೆದರಿಕೆ ಪ್ರಕರಣ ಪ್ರಥಮ್ ಕೊಟ್ಟ ದೂರಿನ್ವಯ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ನಿನ್ನೆ ಬೆಂಗಳೂರು ಗ್ರಾಮಾಂತರ ಎಸ್ಪಿಗೆ ಪ್ರಥಮ್ ದೂರು ನೀಡಿದ್ದರು. ಅವರು ಈ ದೂರನ್ನು ದೊಡ್ಡಬಳ್ಳಾಪುರ ಠಾಣೆಗೆ ವರ್ಗಾವಣೆ ಮಾಡಿದ್ದಾರೆ.
ಘಟನೆ ನಡೆದಿದ್ದು,ದೊಡ್ಡಬಳ್ಳಾಪುರ ಠಾಣಾ ವ್ಯಾಪ್ತಿಯಲ್ಲಿ ಹೀಗಾಗಿ ಎಫ್ ಐಆರ್ ಅನ್ನು ಅಲ್ಲಿಯೇ ದಾಖಲು ಮಾಡಲಾಗಿದ್ದು, ಸದ್ಯ ಎಫ್ ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ. ಬಿಎನ್ ಎಸ್ ಸೆಕ್ಷನ್ 351(2)(3), 352 ಅವಾಚ್ಯ ಶಬ್ಧಗಳ ನಿಂದನೆ ಹಾಗೂ 126(2) r/w 3(5) ಜೀವ ಬೆದರಿಕೆ ಅಡಿ ಪ್ರಕರಣ ದಾಖಲಿಸಲಾಗಿದೆ.
A1 ಬೇಕರಿ ರಘು, A2 ಯಶಸ್ವಿನಿ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿದೆ. ಸಿನಿಮಾ ಪ್ರಮೋಟರ್ ಮಹೇಶ್ ಎಂಬುವವರ ದೇವಸ್ಥಾನದ ಪೂಜೆಗೆ ಹೋಗಿದ್ದಾಗ, ನನ್ನ ಬಾಸ್ ದರ್ಶನ್ ಬಗ್ಗೆ ಮಾತನಾಡ್ತಿಯಾ ಅಂತ ಡ್ರಾಗರ್ ಮತ್ತು ಚಾಕು ತೋರಿಸಿ ಬೆದರಿಕೆ ಹಾಕಿರುವುದಾಗಿ ಪ್ರಥಮ್ ದೂರಿನಲ್ಲಿ ತಿಳಿಸಿದ್ದಾರೆ. ಹಾಗಾಗಿ ಪ್ರಥಮ್ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಂದಿನಿಂದ ತನಿಖೆ ಆರಂಭಿಸಲಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯ ಬಳಿ ಘಟನೆ ನಡೆದಿದ್ದು, ಸ್ಥಳ ಮಹಜರು ನಡೆಸಿ, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಇನ್ಸಪೇಕ್ಟರ್ ಸಾಧಿಕ್ ಪಾಷ ತನಿಖೆ ನಡೆಸಲಿದ್ದಾರೆ.
