Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಆಚೆ ಇರುವ ನಟ ದರ್ಶನ್‌ಗೆ ಶಾಕಿಂಗ್ ನ್ಯೂಸ್‌ವೊಂದು ಕಾದಿದೆ. ಹೌದು, ದರ್ಶನ್‌ನ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಬೆಂಗಳೂರು ಪೊಲೀಸರು ಅಮಾನತ್ತಿನಲ್ಲಿಟ್ಟಿದ್ದಾರೆ. ಕೇಸ್ ಮುಗಿಯುವವರೆಗೂ ಲೈಸೆನ್ಸ್ ಬಳಸುವಂತಿಲ್ಲ ಎಂದು ಸ್ಟ್ರಿಕ್ಟ್ ವಾರ್ನಿಂಗ್ ನೀಡಲಾಗಿದೆ. ದರ್ಶನ್ ನೀಡಿರುವ ಕಾರಣ ಪರಿಗಣಿಸಿ ಕೂಡಾ ಗನ್ ಅಮಾನತ್ತಿನಲ್ಲಿಡಲಾಗಿದೆ.
ಆರ್‌ಆರ್‌ನಗರ ಪೊಲೀಸರಿಗೆ ಕೂಡಲೇ ಎರಡು ಗನ್ ಹಸ್ತಾಂತರ ಮಾಡಬೇಕೆಂದು ದರ್ಶನ್‌ಗೆ ಸೂಚನೆ ನೀಡಲಾಗಿದೆ. “ನನಗೆ ಗನ್ ಬೇಕು, ನಾನೋರ್ವ ಸೆಲೆಬ್ರಿಟಿ. ಹೋದ ಕಡೆ ಬಂದ ಕಡೆ ಸಾಕಷ್ಟು ಜನ ಇರುತ್ತಾರೆ. ಆತ್ಮರಕ್ಷಣೆಗೆ ಗನ್ ಬೇಕೆಂದು ದರ್ಶನ್ ಹೇಳಿದ್ದರು. ಆದರೆ ಈ ಕುರಿತು ಪರಿಶೀಲನೆ ಮಾಡಿದ ಪೊಲೀಸರು ಕೊಲೆಯೆಂಬ ಪ್ರಮುಖ ಕೇಸ್‌ನಲ್ಲಿ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಗನ್ ಲೈಸೆನ್ಸನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡುವ ನಿರ್ಧಾರ ಮಾಡಿದ್ದಾರೆ.
ನಟ ದರ್ಶನ್ ಸಾಕ್ಷಿಗಳಿಗೆ ಬೆದರಿಯೊಡ್ಡುವ ಸಾಧ್ಯತೆ ಇರುವ ಕಾರಣ ಗನ್ ವಾಪಸ್ ಪಡೆಯಲು ಪೊಲೀಸರು ನಿರ್ಧಾರ ಮಾಡಿದ್ದಾರೆ. ಕೊಲೆ ಕೇಸು ಮುಗಿದು ಆರೋಪದಿಂದ ಮುಕ್ತರಾಗುವವರೆಗೂ ನಟ ದರ್ಶನ್ ಗನ್ ಬಳಕೆ ಮಾಡುವಂತಿಲ್ಲ ಎಂದು ಪೊಲೀಸರು ಸ್ಪಷ್ಟವಾಗಿ ಹೇಳಿದ್ದಾರೆ.
