Home » Rishab Shetty – Kamblihula : ಕಂಬ್ಳಿಹುಳ ಚಿತ್ರತಂಡಕ್ಕೆ ರಿಷಬ್ ಶೆಟ್ಟಿ ಸಾಥ್!!!

Rishab Shetty – Kamblihula : ಕಂಬ್ಳಿಹುಳ ಚಿತ್ರತಂಡಕ್ಕೆ ರಿಷಬ್ ಶೆಟ್ಟಿ ಸಾಥ್!!!

4 comments

ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿ ಅಬ್ಬರಿಸಿದ ಕಾಂತಾರ ಸಿನಿಮಾದ ನಡುವೆ ಕೆಲವೊಂದು ಸಿನಿಮಾಗಳು ರಿಲೀಸ್ ಆಗಲು ಕಾತುರದಿಂದ ಕಾಯುತ್ತಿದ್ದವು. ಈ ನಡುವೆ ಸ್ಯಾಂಡಲ್​​ವುಡ್​​ನಲ್ಲಿ ಕಂಬ್ಳಿ ಹುಳ ಸಿನಿಮಾ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಈ ಸಿನಿಮಾದ ಬಗ್ಗೆ ನಟ ರಿಷಬ್ ಶೆಟ್ಟಿ ಕೂಡ ಪೋಸ್ಟ್ ಮಾಡಿದ್ದಾರೆ.

ಕಂಬ್ಳಿಹುಳ ಸಿನಿಮಾ ರಿಲೀಸ್ಗೂ ಮುನ್ನವೇ ಸದ್ದು ಮಾಡಿದ್ದು, ಈ ಸಿನಿಮಾದ ಹಾಡಿನ ಮೂಲಕವೇ ಜನರಲ್ಲಿ ನಿರೀಕ್ಷೆ ಸೃಷ್ಟಿಸಿದೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಸವಿ ದನಿಯ ಮೆರುಗಿನಲ್ಲಿ ಹಾಡು ವೈರಲ್ ಆಗಿ ಸಂಚಲನ ಮೂಡಿಸಿದೆ. “ಜಾರಿ ಬಿದ್ದರೂ ಯಾಕೀ ನಗು” ಎಂಬ ಹಾಡು ಈಗಾಗಲೇ ಸಿನಿ ರಸಿಕರ ಮನಸೆಳೆದಿದೆ.

ಕಂಬ್ಳಿಹುಳ ಸಿನಿಮಾ ರಾಜ್ಯದೆಲ್ಲೆಡೆ ಸುದ್ದಿಯಾಗುತ್ತಿದ್ದು, ಯೋಗರಾಜ್ ಭಟ್, ಜಯತೀರ್ಥ, ಬಿಎಂ ಗಿರಿರಾಜ್, ಕಿರಣ್‌ ರಾಜ್, ಧನಂಜಯ್, ವಿನಯ್ ರಾಜ್‌ಕುಮಾರ್ ಸೇರಿದಂತೆ ಅನೇಕರು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದ್ದಾರೆ.

ಈಗ ಈ ಸಾಲಿಗೆ ರಿಷಬ್ ಶೆಟ್ಟಿ ಅವರು ಕೂಡ ಸೇರಿದ್ದು, ಶೀಘ್ರದಲ್ಲೆ ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ಕಾಂತಾರದ (Kantara) ಅಬ್ಬರದ ಮಧ್ಯೆ ಕನ್ನಡದ ಒಂದಷ್ಟು ಸಿನಿಮಾಗಳು (Cinema) ರಿಲೀಸ್​​ಗೆ ಆಗದೇ ಬಾಕಿ ಉಳಿದಿತ್ತು. ಸದ್ಯ ಕಂಬ್ಳಿಹುಳ (Kamblihula) ಸಿನಿಮಾ ರಿಲೀಸ್ ಆಗಿದ್ದು, ಈ ಸಿನಿಮಾದ ಬಗ್ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈ ನಡುವೆ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಈ ಸಿನೆಮಾದ ಕುರಿತಾಗಿ ಕಮೆಂಟ್ ಮಾಡಿದ್ದಾರೆ.

ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಶೇರ್ ಮಾಡಿರುವ ರಿಷಬ್ ಶೆಟ್ಟಿ ‘ಕಂಬ್ಳಿ ಹುಳ’ ಚಿತ್ರಕ್ಕೆ ಎಲ್ಲೆಡೆಯಿಂದ ಸಾಕಷ್ಟು ಪ್ರಶಂಸೆ ಕೇಳಿಬರುತ್ತಿದ್ದು, ಆದಷ್ಟು ಬೇಗ ಸಿನಿಮಾ ನೋಡುತ್ತೇನೆ. ಒಂದು ಉತ್ತಮ ಚಿತ್ರವನ್ನು ಗೆಲ್ಲಿಸಲು ಇಡೀ ಚಿತ್ರರಂಗ ಒಟ್ಟಾಗಿ ನಿಂತಿರುವುದು ಹೆಮ್ಮೆಯ ವಿಷಯವಾಗಿದೆ. ಇದು ಜನತೆಗೂ ತಲುಪಿ ಚಿತ್ರಮಂದಿರಗಳು ಹೌಸ್ ಫುಲ್ ಆಗಲಿ ಎಂದು ಹಾರೈಸಿದ್ದಾರೆ. ಜೊತೆಗೆ ನಿರ್ದೆಶಕ ನವನ್ ಹಾಗು ತಂಡಕ್ಕೆ ಅಭಿನಂದನೆಗಳು! ಎಂದು ರಿಷಬ್ ಶೆಟ್ಟಿ ಪೋಸ್ಟ್​​ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

ಹಚ್ಚ ಹಸಿರಿನ ವನಸಿರಿಯ ನಡುವೆ ಶೃಂಗೇರಿ, ತೀರ್ಥಹಳ್ಳಿ, ಕೊಪ್ಪ, ಸಕಲೇಶಪುರಗಳಲ್ಲಿ ಕಂಬ್ಳಿಹುಳ ಚಿತ್ರೀಕರಣಗೊಂಡಿದ್ದು, ಚಿತ್ರದ ನಾಯಕ ನಾಗಿ,ಅಂಜನ್ ನಾಗೇಂದ್ರ ಮತ್ತು ನಾಯಕಿ ಅಶ್ವಿತಾ ಹೆಗ್ಡೆ ನಟಿಸಿದ್ದಾರೆ.

ಸದ್ಯ ಅನೇಕ ಕನ್ನಡ ಸಿನಿ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ರೋಹಿತ್ ಕುಮಾರ್, ದೀಪಕ್ ರೈ ಪಣಜಿ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ಸೇರಿದಂತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

You may also like

Leave a Comment