Prakash Raj: ಸದಾಕಾಲ ಕೇಂದ್ರ ಸರ್ಕಾರ, ನರೇಂದ್ರ ಮೋದಿ ಹಾಗೂ ಹಿಂದೂ ಧಾರ್ಮಿಕ ಪದ್ಧತಿಗಳನ್ನು ಟೀಕೆ ಮಾಡುತ್ತಲೇ ಸದಾ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗೋ ಪ್ರಕಾಶ್ ರಾಜ್ ಅವರು ಈಗ ಕುಂಭಮೇಳದ ತೀರ್ಥ ಸ್ನಾನ ಮಾಡುತ್ತಿರುವ ಇಮೇಜ್‌ವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತದೆ.
ಹೌದು, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಈ ವೇಳೆ ಮಹಾಕುಂಭಮೇಳದ ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪ್ರಕಾಶ್ ರಾಜ್ ತೀರ್ಥ ಸ್ನಾನ ಮಾಡುತ್ತಿರುವ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ. ಆದರೆ ಇದು ನಿಜವಾದ ಫೋಟೋ ಅಲ್ಲ. ಇದೀಗ ವೈರಲ್ ಆಗಿರುವ ಫೋಟೋ ಎಐ ಜನರೇಟೆಡ್ ಇಮೇಜ್ ಆಗಿದ್ದು, ಪ್ರಕಾಶ್ ರಾಜ್ ಅವರ ಕಾನೂನು ತಂಡ ಇದನ್ನು ಗ್ರಾಫಿಕ್ಸ್ ಎಂದು ಹೇಳಿದೆ. ಆದರೆ, ಇದು ಗ್ರಾಫಿಕ್ಸ್ ಅಲ್ಲ. ಎಐ ಮೂಲಕ ಸೃಷ್ಟಿ ಮಾಡಿರುವ ಕೃತಕ ಇಮೇಜ್ ಎಂದು ತಿಳಿದುಬಂದಿದೆ.
ಇನ್ನು ಹೆಚ್ಚಿನವರು ಇದನ್ನೇ ನಿಜ ಎನ್ನುವಂತೆ ಪ್ರಕಾಶ್ ರಾಜ್‌ಗೆ ಈಗಲಾದರೂ ಬುದ್ದಿಬಂತಲ್ಲ ಎನ್ನುವ ಅರ್ಥದಲ್ಲಿ ಕಾಮೆಂಟ್ ಮಾಡಿದ್ದಾರೆ. ಇದು ಎಐ ಇಮೇಜ್ ಅನ್ನೋದು ಗೊತ್ತಿದ್ದರೂ, ಪ್ರಕಾಶ್ ರಾಜ್ ಅವರ ಕಾನೂನು ತಂಡಕ್ಕೆ ಈ ಚಿತ್ರವನ್ನು ಕಳಿಸಿ ಇದು ಎಐ ಇಮೇಜ್ ಅಥವಾ ನಿಜವಾದ ಇಮೇಜ್ ಎಂದು ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಅವರು ‘ಸುಳ್ಳು ಗ್ರಾಫಿಕ್ಸ್’ ಎಂದು ಉತ್ತರ ನೀಡಿದ್ದಾರೆ.
