Home » ‘ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆನಂದ್ ಮಹಿಂದ್ರಾ | ಸ್ಟೆಪ್ ಹೇಳಿಕೊಟ್ಟವರು ಇವರೇ ನೋಡಿ

‘ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆನಂದ್ ಮಹಿಂದ್ರಾ | ಸ್ಟೆಪ್ ಹೇಳಿಕೊಟ್ಟವರು ಇವರೇ ನೋಡಿ

by ಹೊಸಕನ್ನಡ
0 comments

ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಬಂದ ಆರ್ ಆರ್ ಆರ್ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ನಾಟು ನಾಟು…ಹಾಡು ಮತ್ತು ಸ್ಟೆಪ್ ಎಲ್ಲರ ಹೃದಯ ಗೆದ್ದಿದೆ. ಈ ಹಾಡಿಗೆ ಹೆಜ್ಜೆ ಹಾಕದವರೇ ಇಲ್ಲ. ಅನೇಕರು ನಾಟು ನಾಟು ಎಂದು ಹೆಜ್ಜೆ ಹಾಕಿ ಸಂಭ್ರಮಿಸುತ್ತಿದ್ದಾರೆ. ಇದೀಗ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಕೂಡ ನಾಟು ನಾ9ಟು ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಅವರಿಗೆ ಸ್ಟೆಪ್ ಹೇಳಿಕೊಟ್ಟದ್ದು ಯಾರು ಗೊತ್ತಾ?

ಆನಂದ್ ಮಹಿಂದ್ರ ಡ್ಯಾನ್ಸ್ ಮಾಡಿದ ಸಣ್ಣ ವಿಡಿಯೋ ಕ್ಲಿಪ್ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ ಅವರೇ ಸ್ವತಃ ಆನಂದ್ ಮಹೀಂದ್ರಾರಿಗೆ ಸ್ಟೆಪ್ ಹೇಳಿಕೊಟ್ಟಿದ್ದಾರೆ! ಹೌದು ಆನಂದ್ ಮಹೀಂದ್ರಾ ಅವರಿಗೆ ತೆಲುಗು ಸ್ಟಾರ್ ರಾಮ್ ಚರಣ್ ನಾಟು ನಾಟು ಸ್ಟೆಪ್ ಹೇಳಿಕೊಟ್ಟಿದ್ದಾರೆ. ಇದಕ್ಕೆ ಆನಂದ್ ಅವರು ಅದ್ಬುತವಾಗಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸಣ್ಣ ವಿಡಿಯೋ ಕ್ಲಿಪ್‌ನಲ್ಲಿ, ಆನಂದ್ ಮಹೀಂದ್ರಾ ಅವರು ರಾಮ್ ಚರಣ್ ಅವರಿಂದ ನಾಟು ನಾಟುವಿನ ಸ್ಟೆಪ್ ಹೇಗೆ ಹಾಕಬೇಕೆಂದು ಕಲಿಯುತ್ತಿರುವುದನ್ನು ನೋಡಬಹುದು. ಹೈದರಾಬಾದ್ ಇ-ಪ್ರಿಕ್ಸ್‌ನಲ್ಲಿ ಇಬ್ಬರೂ ಒಟ್ಟಿಗೆ ನೃತ್ಯ ಮಾಡಿ ನಂತರ ಪರಸ್ಪರ ಅಪ್ಪಿಕೊಂಡಿರುವುದು ಈ ವಿಡಿಯೋದಲ್ಲಿದಲ್ಲಿದೆ. ಅಲ್ಲದೆ ಹೈದರಾಬಾದ್ ಪ್ರಿಕ್ಸ್ ನಲ್ಲಿ ನಟ ರಾಮ್ ಚರಣ್ ಅವರಿಂದ `ನಾಟು ನಾಟು’ ಹಾಡಿನ ಬೇಸಿಕ್ ಸ್ಟೆಪ್ ಕಲಿತೆ. ಧನ್ಯವಾದಗಳು ಮತ್ತು ಆಸ್ಕರ್‌ಗೆ ಶುಭವಾಗಲಿ ನನ್ನ ಗೆಳೆಯ ಎಂದು ಟ್ವಿಟ್ಟರ್​ನಲ್ಲಿ ರಾಮ್ ಚರಣ್​ಗೆ ವಿಶ್ ಮಾಡಿದ್ದಾರೆ.

ಆನಂದ್ ಮಹೀಂದ್ರಾ ಅವರ ಟ್ವೀಟ್‌ಗೆ ರಾಮ್ ಚರಣ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ಆನಂದ್ ಮಹೀಂದ್ರಾ ಅವರೇ ನೀವು ನನಗಿಂತ ವೇಗವಾಗಿ ಡಾನ್ಸ್ ಮಾಡುತ್ತೀರಿ. ಅದ್ಭುತವಾದ ಫನ್ ಕ್ಷಣವಾಗಿತ್ತು. ಆರ್ ಆರ್ ಆರ್ ತಂಡಕ್ಕೆ ಶುಭಕೋರಿದ್ದಕ್ಕೆ ಧನ್ಯವಾದಗಳು’ ಎಂದು ಹೇಳಿದ್ದಾರೆ. ಇಬ್ಬರ ಮಾತುಕತೆ, ಡಾನ್ಸ್ ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

You may also like

Leave a Comment